ಮಂಡ್ಯ: ಪ್ರಾಣಿಗಳು ತಿನ್ನಲು ಯೋಗ್ಯವಲ್ಲದ ಪಡಿತರ ವಿತರಣೆಯೇ ಇವರ ಸಾಧನೆ, ಇವರ ಅಕ್ಕಿ ಪ್ರಾಣಿಪಕ್ಷಿ ಕೂಡ ಮುಟ್ಟಲ್ಲ ಎಂದು ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಖಾಸಗಿ ಕಾರ್ಯಕ್ರಮ ಹಿನ್ನೆಲೆ ಮಂಡ್ಯಕ್ಕೆ ಆಗಮಿಸಿದ್ದ ವೇಳೆ ನಾಗಮಂಗಲದಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುವ ಪಡಿತರ ಕಳೆಪೆಯಾಗಿದೆ ಎಂದು ಆರೋಪಿಸಿದರು.
ಹೊಸ ಸರ್ಕಾರ 3ಕೆ.ಜಿ ಅಕ್ಕಿ, 2 Kಕೆ.ಜಿ ರಾಗಿ ವಿತರಿಸುತ್ತಿದೆ. ರಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ಪ್ರಾಣಿ-ಪಕ್ಷಿಗಳು ತಿನ್ನಲು ಯೋಗ್ಯವಲ್ಲದ ಪಡಿತರ ಸರ್ಕಾರ ವಿತರಿಸುತ್ತಿದೆ. ನಾನು ಹಳ್ಳಿಗಳಿಗೆ ಭೇಟಿ ಕೊಟ್ಟ ವೇಳೆ ಕಳಪೆ ಪಡಿತರ ವ್ಯವಸ್ಥೆ ಬಗ್ಗೆ ಜನ ದೂರು ಹೇಳ್ತಿದ್ದಾರೆ. ಸರ್ಕಾರದ ಗಮನಕ್ಕೆ ಈ ವಿಚಾರ ಬಂದಿದ್ಯೋ, ಇಲ್ಲವೋ ಗೊತ್ತಿಲ್ಲ. ಹಸಿವು ನೀಗಿಸುವುದಾಗಿ ಹೇಳಿ ಕಳಪೆ ಆಹಾರ ನೀಡುವುದು ಸಾಧನೆಯಲ್ಲ. ಕೋಟಿ ಕೋಟಿ ವ್ಯಯಿಸಿ ಜಾಹೀರಾತು ಹಾಕುವ ಬದಲು ಇಂತಹ ಸಮಸ್ಯೆಗಳನ್ನು ಮೊದಲು ಬಗೆಹರಿಸಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಟಿಟಿಡಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದ ಆರ್ ವಿ ದೇಶಪಾಂಡೆ
ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದಾರೆ. ಈ ಮೂಲಕ ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ವಿಪಕ್ಷಗಳ I.N.D.I.A ಮೈತ್ರಿಕೂಟದಿಂದಲೂ ಹೊರಗುಳಿಯುವುದಾಗಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ತಿಂಗಳಿಂದ ‘ಆಶಾಕಿರಣ ಯೋಜನೆ’ ಜಾರಿ: ಸಚಿವ ದಿನೇಶ್ ಗುಂಡೂರಾವ್
ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಿನಿಮಾದತ್ತ ಗಮನ ಹರಿಸಲಿದ್ದು, ಚುನಾವಣೆ ಸ್ಪರ್ಧೆ ಬಗ್ಗೆ ಚಿಂತಿಸಿಲ್ಲ ಎಂದಿದ್ದಾರೆ. ಜೆಡಿಎಸ್ ನಾಯಕರು ಪಕ್ಷ ಬಿಡುತ್ತಿರುವ ಕುರರಿತು ಮಾತನಾಡಿದ ಅವರು, ‘ಯಾವುದೇ ಶಾಸಕರು ರಾಜೀನಾಮೆ ನೀಡುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಅದು ಅವರ ಆಯ್ಕೆಯಾಗಿದೆ’ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.