ನವದೆಹಲಿ: ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿರುವ ಯುಕೆ (ಬ್ರಿಟನ್) ಪ್ರಧಾನಿ ರಿಷಿ ಸುನಕ್ ದೇವಾಲಯ ಭೇಟಿ ನೀಡಿದ್ದಾರೆ. ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಪೂಜೆ ಮತ್ತು ಅಭಿಷೇಕ ನೆರವೇರಿಸಿದರು.
ದೇವಾಲಯದ ಅರ್ಚಕರು ದಂಪತಿಯನ್ನು ಆವರಣದ ಸುತ್ತಲೂ ಕರೆದೊಯ್ದು ಅವರಿಗೆ ಸ್ವಾಮಿನಾರಾಯಣ ಅಕ್ಷರಧಾಮದ ಕುರಿತು ಮಾಹಿತಿ ನೀಡಿದರು. ಬಳಿಕ ಮಾತನಾಡಿರುವ ರಿಷಿ ಸುನಕ್, ಭಾರತದೊಂದಿಗಿನ ನನ್ನ ಸಂಪರ್ಕಗಳ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ … ಹೆಮ್ಮೆಯ ಹಿಂದೂ ಎಂದರೆ ನಾನು ಯಾವಾಗಲೂ ಭಾರತ ಮತ್ತು ಭಾರತದ ಜನರೊಂದಿಗೆ ಸಂಪರ್ಕವನ್ನು ಹೊಂದಿರುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: ಗೆವೆಲ್ ಹಸ್ತಾಂತರಿಸಿ ಐತಿಹಾಸಿಕ ಜಿ20ಗೆ ತೆರೆ ಎಳೆದ ಮೋದಿ
2015ರಲ್ಲಿ ಮೊದಲ ಬಾರಿಗೆ ಅವರು ಯುಕೆ ಸಂಸದರಾಗಿ ಆಯ್ಕೆಯಾದರು. ಬಳಿಕ ಹಣಕಾಸು ಸಚಿವರಾಗಿಯೂ ಅಧಿಕಾರ ನಿರ್ವಹಿಸಿದ್ದರು. ಅವರ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್‌ನ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿಯಾಗಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.