ನವದೆಹಲಿ : ಸುಧಾ ಮೂರ್ತಿಯವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಬ್ರಿಟನ್ ಪ್ರಧಾನಿ ಅಳಿಯ ರಿಷಿ ಸುನಕ್ ಸಂತಸಪಟ್ಟಿದ್ದಾರೆ. ಸುಧಾಮೂರ್ತಿ ರಾಷ್ಟ್ರಪತಿ ಭವನದಲ್ಲಿ ಸ್ವೀಕರಿಸಿದ್ದು, ಅಕ್ಷತಾ ಮೂರ್ತಿ ಅವರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.


ರಿಷಿ ಸುನಕ್ ಹೆಮ್ಮೆಯ ದಿನ ಎಂದು ಹೇಳಿದರು. 72 ವರ್ಷದ ಸುಧಾ ಮೂರ್ತಿ ಸಮಾಜ ಸೇವೆಗೆ ನೀಡಿದ ಕೊಡುಗೆಗಾಗಿ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ನನ್ನ ತಾಯಿಯವರ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿ 2023 ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನಾನು ಹೆಮ್ಮೆಯಿಂದ ನೋಡಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ನನ್ನ ಅಮ್ಮ ಈ ಸಮಾಜಕ್ಕೆ ಮಾಡಿ ಕೆಲಸಕ್ಕೆ ಇದು ದೊಡ್ಡ ಗೌರವ, ಅವರು ಮಾಡಿದ ಕೆಲಸದ ಬಗ್ಗೆ ಅವರಿಗೆ ಇಂದು ತೃಪ್ತಿ ತಂದಿರಬಹುದು. ನಮಗೆಲ್ಲ ಅವರು ದೊಡ್ಡ ಸ್ಫೂರ್ತಿ ಎಂದು ಹೇಳಿದರು.