ಧಾರವಾಡ: ನದಿ ವಿವಾದಗಳು ಕೋರ್ಟ್‌ನಲ್ಲಿದ್ದು, ಅವುಗಳನ್ನು ನಾವು ರಾಜಕೀಯವಾಗಿ ಉಪಯೋಗಿಸುವುದಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ, ಕಾವೇರಿ, ಮಹದಾಯಿ ನದಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ವಿಚಾರದಲ್ಲಿ ತಜ್ಞರು ಹಾಗೂ ಸಚಿವರು ಇದ್ದಾರೆ. ಸಂಬಂಧಿತ ಮಾಹಿತಿಗಳನ್ನು ಅವರೇ ಕೊಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆಗೆ ಜಂಟಿಯಾಗಿ ಸ್ಪರ್ಧೆ; 13 ಸದಸ್ಯರ ಸಮನ್ವಯ ಸಮಿತಿ ರಚಿಸಿದ ʼಇಂಡಿಯಾʼ
ಮೇಲ್ನೋಟಕ್ಕೆ ನಮಗೆ ಅನ್ಯಾಯ ಆಗುತ್ತಲೇ ಇದೆ. ಎಲ್ಲ ಪಕ್ಷಗಳು ನದಿ ವಿವಾದಗಳ ವಿಷಯದಲ್ಲಿ ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ. ಸರ್ವ ಪಕ್ಷ ನಿಯೋಗದಲ್ಲಿ ಪ್ರಧಾನ ಮಂತ್ರಿ ಭೇಟಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿವರಿಸಿದರು. ಎಲ್ಲರನ್ನೂ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಬೇಕು, ಸಭೆ ನಂತರ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರಧಾನಮಂತ್ರಿ ಭೇಟಿಗೆ ಹೋಗುತ್ತಾರೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.