Friday, September 29, 2023
spot_img
- Advertisement -spot_img

ಸನಾತನ ಧರ್ಮ ಬಗ್ಗೆ ಉತ್ತರ ಮೋಹನ್ ಭಾಗವತ್ ಕೇಳಿ: ಪಿಎಂ ಮೋದಿಗೆ ಡಿಎಂಕೆ ಪ್ರತ್ಯುತ್ತರ

ನವದೆಹಲಿ: ಸನಾತನ ಧರ್ಮ ಕುರಿತ ಉದಯನಿಧಿ ಸ್ಟಾಲಿನ್ ಟೀಕೆ ಸಂಬಂಧ ದೇಶದಾದ್ಯಂತ ಆಕ್ರೋಶದ ಕಿಚ್ಚು ಹೊತ್ತಿಸಿದೆ. ಈ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಪ್ರತಿಕ್ರಿಯಿಸಿ ಈ ಬಗ್ಗೆ ಡಿಎಂಕೆ ಸೂಕ್ತ ಉತ್ತರ ನೀಡಬೇಕು ಎಂದಿದ್ದರು.

ಪ್ರಧಾನಿ ಮೋದಿ ಅವರ ಈ ಹೇಳಿಕೆ ಸಂಬಂಧ ಡಿಎಂಕೆ ತನ್ನ ಮುಖವಾಣಿ ‘ಮುರಸೋಲಿ’ಯ ಸಂಪಾದಕೀಯದಲ್ಲಿ ಪ್ರತ್ಯುತ್ತರ ನೀಡಿದೆ. ಸನಾತನ ಧರ್ಮದ ರಕ್ಷಣೆ ಹೊಣೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ್ದಾರೆ ಎಂದು ಟೀಕಿಸಿದೆ. ಜೊತೆಗೆ ಸನಾತನ ಧರ್ಮ ಕುರಿತ ಉತ್ತರಕ್ಕೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಳಿ ಕೇಳಲಿ, ಜಾತಿ ರಚನೆ ಮತ್ತು ಸಮಾನತೆ ಮತ್ತು ಮೀಸಲಾತಿಯ ಅಗತ್ಯತೆಯ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರ ನೀಡಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: G20 Summit : ದೆಹಲಿ ಘೋಷಣೆಗೆ ಒಮ್ಮತದ ಅಂಗೀಕಾರ: ಇದು ಭಾರತಕ್ಕೆ ಸಿಕ್ಕ ಜಯ!

ನಾಗ್ಪುರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗತವ್, 2,000 ವರ್ಷಗಳ ತಾರತಮ್ಯವನ್ನು ವಿವರಿಸಿದ್ದರು, ಸಮಾನತೆಯ ಅಗತ್ಯವನ್ನು ಒತ್ತಿಹೇಳಿದರು ಮತ್ತು ತುಳಿತಕ್ಕೊಳಗಾದ ಮತ್ತು ಹಿಂದುಳಿದ ವರ್ಗಗಳ ಜನರ ಮೀಸಲಾತಿಗೆ ಆರ್‌ಎಸ್‌ಎಸ್ ಎಂದಿಗೂ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದರು. ಹೀಗಾಗಿ ಅವರ ಬಳಿಯೇ ಉತ್ತರ ಪಡೆದುಕೊಳ್ಳಿ ಎಂದಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಿಂದ ವಜಾಗೊಂಡಿದ್ದ ಸಚಿವ ಶಿವಸೇನೆ ಸೇರ್ಪಡೆ!

ಇತ್ತೀಚಿಗೆ ಮೋಹನ್ ಭಾಗವತ್ ಮಾತನಾಡುತ್ತಾ, ಎಲ್ಲಿಯವರೆಗೆ ಸಾಮಾಜಿಕ ತಾರತಮ್ಯಗಳು ಸಮಾಜದಲ್ಲಿರುತ್ತದೆಯೋ ಅಲ್ಲಿಯ ವರೆಗೂ ಮೀಸಲಾತಿ ಎಂಬುದು ಇರಬೇಕಾಗುತ್ತದೆ ಎಂದಿದ್ದರು. ಈ ಹೇಳಿಕೆಗಳು ಹೊರಬಿದ್ದ ಬಳಿಕ ಡಿಎಂಕೆ ಮುಖವಾಣಿಯಲ್ಲಿ ಈ ರೀತಿಯ ಸಂಪಾದಕೀಯ ಪ್ರಕಟಗೊಂಡಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles