ದಾವಣಗೆರೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನನಗೆ ಕಾಂಗ್ರೆಸ್ ಗೆ ಬರುವಂತೆ ಮುಕ್ತ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಮುಂದೇನಾಗುತ್ತೇ ನೋಡೋಣ ಎಂದ ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.


ರೇಣುಕಾಚಾರ್ಯರ ನಡೆ ಹಲವು ಅನುಮಾನ, ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡುತ್ತಿರುವುದು ಅನುಮಾನಕ್ಕೆ ಗುರಿಮಾಡುತಿದೆ. ರೇಣುಕಾಚಾರ್ಯ ಸ್ವ ಪಕ್ಷದವರ ವಿರುದ್ಧವೇ ಮಾತನಾಡುತ್ತಿರುವ ಬೆನ್ನಲ್ಲೇ, ಸಾಲು ಸಾಲು ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡುತ್ತಿದ್ದಾರೆ. ಇದೀಗ ಎರಡನೇ ಭಾರಿ ಸಚಿವ ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಮುಕ್ತವಾಗಿ ಕರೆದುಕೊಳ್ಳುತ್ತೇವೆ ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದ್ದಾರೆಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ : ಸಂವಿಧಾನ-ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಜವಾಬ್ದಾರಿ: ಮಲ್ಲಿಕಾರ್ಜುನ ಖರ್ಗೆ


ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಇದು ಸೌಜನ್ಯದ ಭೇಟಿ, ರಾಜಕೀಯ ಹೊರತಾಗಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ಬಿಜೆಪಿಯಲ್ಲಿರುವೆ, ರಾಜಕೀಯ ವಿಚಾರಕ್ಕೆ ನಾನಿಲ್ಲಿ ಬಂದಿಲ್ಲ, ಕ್ಷೇಮ ವಿಚಾರಿಸಲು ಬಂದಿದ್ದೇನೆ. ಕಾಂಗ್ರೆಸ್ ನವರು ವಿಶ್ವಾಸದಲ್ಲಿ ತಮಾಷೆ ಮಾಡಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಿನಿ ಅಂತ ನಾನೆಲ್ಲೂ ಹೇಳಿಲ್ಲ. ನಾನು ಎಂಪಿ ಟಿಕೆಟ್ ಪ್ರಬಲ ಆಕಾಂಕ್ಷಿ, ಮುಂದೇನಾಗುತ್ತೋ ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು ಎಂದ ಡಿ.ಕೆ. ಶಿವಕುಮಾರ್!
ರೇಣುಕಾಚಾರ್ಯ ರಾಜಕೀಯ ಹೊರತುಪಡಿಸಿ ಭೇಟಿಯಾದರೂ ಸಹ, ಸ್ವ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವುದು, ಪದೇ ಪದೇ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರೇಣುಕಾಚಾರ್ಯ ಅವರ ನಡೆ ಒಂದು ರೀತಿ ನಿಗೂಢವಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.