ಕೇರಳ : ಅಯ್ಯಪ್ಪ ದೇವರ ದೇಗುಲದೊಳಗೆ ಪೋಸ್ಟರ್‌ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ಹೊಂದಿರುವ ಯಾವುದೇ ಯಾತ್ರಿಕರನ್ನು ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಇತ್ತೀಚೆಗಷ್ಟೇ ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿ ಯುವಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪಸ್ವಾಮಿ ದರ್ಶನ ಪಡದಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದರು. ಇಂಥ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿರುವ ಕೇರಳ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್‌ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಇಂಥ ಪೋಸ್ಟರ್ ದೇಗುಲದೊಳಕ್ಕೆ ಅನುಮತಿಸುವುದಿಲ್ಲ ಎಂದಿದೆ. ತಮ್ಮ ನೆಚ್ಚಿನ ಚಲನಚಿತ್ರ ತಾರೆಯರನ್ನು ಪ್ರದರ್ಶಿಸಲು ಭಿತ್ತಿಪತ್ರಗಳು, ಧ್ವಜಗಳು ಮತ್ತು ಇತರ ಸಾಧನಗಳನ್ನು ಹೊತ್ತ ಭಕ್ತರಿಗೆ ಶಬರಿಮಲೆಯೊಳಗೆ ಪ್ರವೇಶ ನಿರಾಕರಿಸಲಾಗುವುದು ಎಂದು ತೀರ್ಪು ನೀಡಿದೆ.
ಕೆಲ ಭಕ್ತರು ಪುನೀತ್ ರಾಜ್‌ಕುಮಾರ್ ಫೋಟೋ ಹಿಡಿದು ಹೋಗಿದ್ದರು. ಶಬರಿಮಲೆ ಸನ್ನಿಧಾನಂನ ಸೋಪಾನಂನಲ್ಲಿ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರ ಪೋಸ್ಟರ್‌ಗಳನ್ನು ಹಿಡಿದು ವಾದ್ಯಗಳೊಂದಿಗೆ ಪ್ರದರ್ಶನ ನೀಡಿದ ಘಟನೆಗಳೂ ನಡೆದಿದ್ದವು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಂಡಳಿಗೆ ಹೆಚ್ಚಿನ ನಿರ್ದೇಶನ ನೀಡಲಾಗಿದೆ.