ಮುಂಬೈ: ಕಾಂಗ್ರೆಸ್‌ನಿಂದ ವಜಾಗೊಂದಿಡ್ದ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಶಿವಸೇನೆ ಸೇರ್ಪಡೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ಘೋಷಿಸಿದ್ದಾರೆ.
ಜುಂಜುನು ಜಿಲ್ಲೆಯ ಗುಧಾದ ವಿಧಾನಸಭಾ ಕ್ಷೇತ್ರದ ಉದಯಪುರವತಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿಂಧೆ, ರಾಜಸ್ಥಾನದ ಮಾಜಿ ಸಚಿವರನ್ನು ಶಿವಸೇನೆಗೆ ಸ್ವಾಗತಿಸಿದರು ಮತ್ತು ರಾಜೇಂದ್ರ ಸಿಂಗ್ ತಮ್ಮ ನಂಬಿದ್ದ ಜನರ ಅಭಿವೃದ್ದಿ ದೃಷ್ಟಿಯಿಂದ ಅವರು ಸಚಿವ ಸ್ಥಾನ ತೊರೆದರು ಎಂದಿದ್ದಾರೆ.
ರಾಜಸ್ಥಾನ್ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಚಿವರಾಗಿದ್ದ ಅವರು, ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳ ನೀಡುತ್ತಿದ್ದರು ಎಂದು ವಜಾ ಮಾಡಲಾಗಿತ್ತು. ಇದೀಗ ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ಶಿವಸೇನೆ ಭಾಗವಾಗಿದ್ದಾರೆ.
ಇದನ್ನೂ ಓದಿ: ‘ಭಾರತ ಮಂಟಪ’ದಲ್ಲಿ ಗಮನ ಸೆಳೆದ ಕೋನಾರ್ಕ್ ಚಕ್ರ; ಏನಿದು ಗೊತ್ತಾ?
ರಾಜಸ್ಥಾನಕ್ಕೆ ಕೈಗಾರಿಕೆಗಳ ಅಗತ್ಯವಿದೆ ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಗಣಿಗಾರಿಕೆಯಂತಹ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ. ‘ಸತ್ಯಕ್ಕಾಗಿ’ ಗೂಧಾ ಅವರು ಸಚಿವ ಸ್ಥಾನವನ್ನು ತ್ಯಜಿಸಿದರು ಮತ್ತು ಶಿವಸೇನೆಗೆ ಸೇರಿದ್ದಾರೆ ಎಂದರು.
ರಾಜೇಂದ್ರ ಗುಧಾ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದರು ಮತ್ತು ಇತರ ಐದು ಮಂದಿ ಬಿಎಸ್‌ಪಿ ಶಾಸಕರೊಂದಿಗೆ ಕಾಂಗ್ರೆಸ್‌ಗೆ ಸೇರಿದ್ದರು. ಬಳಿಕ ಇದರಲ್ಲಿ ಕೆಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು ಅವರಲ್ಲಿ ಗುಧಾ ಕೂಡ ಒಬ್ಬರಾಗಿದ್ದಾರೆ. ಆದರೆ ಕಾಂಗ್ರೆಸ್ ಅವರನ್ನು ವಜಾಗೊಂಡಿದ್ದರಿಂದ ಈಗ ಶಿವಸೇನೆ ಸೇರಿದ್ದಾರೆ.
ಇದನ್ನೂ ಓದಿ: ‘ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ಸಮೂಹವನ್ನು ಮೋದಿ ನಂಬಿದ್ದಾರೆ’
ಕಾಂಗ್ರೆಸ್ ಸಚಿವರಾಗಿದ್ದ ಗುಧಾ ಮಣಿಪುರ ಘಟನೆಗಳ ಕುರಿತು ಪ್ರತಿಕ್ರಿಯಿಸುವಾಗ ‘ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಲೋಪಗಳನ್ನು ಸರಿಪಡಿಸುವ ಬದಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆಯೆ ಮುಂದುವರಿದರೆ ಮಹಿಳಾ ದೌರ್ಜನ್ಯಗಳಲ್ಲಿ ರಾಜಸ್ಥಾನ ನಂಬರ್ ಒನ್ ಆಗಲಿದೆ’ ಎಂದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.