ನವದೆಹಲಿ: ದೇಶದಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ್’ ಎಂಬುದಾಗಿ ಮರುನಾಮಕರಣ ಮಾಡುವ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಜಿ–20 ಶೃಂಗ ಸಭೆಯಲ್ಲಿ ಭಾಗಿಯಾಗುವ ನಾಯಕರ ಔತಣಕೂಟಕ್ಕೆ ರಾಷ್ಟ್ರಪತಿ ನೀಡಿರುವ ಆಮಂತ್ರಣದಲ್ಲಿ ‘ಪ್ರೆಸಿಡೆಂಡ್ ಆಫ್ ಭಾರತ್’ ಎಂದು ಮುದ್ರಿಸಲಾಗಿತ್ತು. ಆದರೆ ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಶಿಯಾನ್-ಇಂಡಿಯನ್ ಶೃಂಗಸಭೆಯ ಫಂಕ್ಷನ್ ನೋಟ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಮುದ್ರಿಸಲಾಗಿದೆ.
ಈ ಪತ್ರವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹಂಚಿಕೊಂಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಮುದ್ರಿತವಾಗಿದೆ. ಈ ಫಂಕ್ಷನ್ ನೋಟ್ ಭಾರೀ ವೈರಲ್ ಆಗುತ್ತಿದ್ದು, ಇಂಡಿಯಾ ಹೆಸರು ಬದಲಾಗಿ ಭಾರತ್ ಎಂದು ಮರು ನಾಮಕರಣವಾಗುವುದು ಖಚಿತ ಎನ್ನಲಾಗ್ತಿದೆ.
ಇದನ್ನೂ ಓದಿ: G20 ಆಮಂತ್ರಣದಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’: ವಿಪಕ್ಷಗಳಿಂದ ವಿರೋಧ
ಇದಕ್ಕೂ ಮೊದಲು ಜಿ–20 ಶೃಂಗ ಸಭೆಯಲ್ಲಿ ಭಾಗಿಯಾಗುವ ನಾಯಕರ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್ ಆಫ್ ಭಾರತ್’ ಎನ್ನುವ ಹೆಸರು ಮುದ್ರಿಸಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು.
ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರುವುದಕ್ಕೆ ಕೇಂದ್ರ ಸರ್ಕಾರವು ಭಯಭೀತಗೊಂಡಿದೆ. ಹೀಗಾಗಿ ಹೆಸರು ಬದಲಾವಣೆಯ ಕಾರ್ಯಕ್ಕೆ ಕೈಹಾಕಿದೆ ಎಂದು ಆರೋಪಿಸಿದ್ದರು. ಆದರೆ ಸರ್ಕಾರದಿಂದ ಈ ಕುರಿತು ಎಲ್ಲಿಯೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.