Sunday, September 24, 2023
spot_img
- Advertisement -spot_img

BREAKING NEWS :ಹಳೆಯ ಸಂಸತ್ ಭವನ ಇನ್ಮುಂದೆ ‘ಸಂವಿಧಾನ್ ಸದನ್’: ಪ್ರಧಾನಿ ಮೋದಿ ಘೋಷಣೆ

ನವದೆಹಲಿ : ಸಂಸತ್ತಿನ ಉಭಯ ಸದನಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆ, ಹಳೆಯ ಸಂಸತ್ ಕಟ್ಟಡಕ್ಕೆ ‘ಸಂವಿಧಾನ್ ಸದನ್’ ಎಂದು ನಾಮಕರಣ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಕಳೆದ 75 ವರ್ಷಗಳಿಂದ ಸಂಸತ್ತಿನ ಅಧಿವೇಶನಗಳು ನಡೆದ ಐತಿಹಾಸಿಕ ಕಟ್ಟಡವನ್ನು ‘ಹಳೆಯ ಕಟ್ಟಡ’ ಎಂದು ಸಂಬೋಧಿಸಿ ಘನತೆಗೆ ಕುಂದು ತರಬಾರದು ಎಂದು ಮೋದಿ ಹೇಳಿದರು.

ಹಳೆಯ ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಪ್ರಧಾನಿ, ಈ ಸಂಸತ್ ಕಟ್ಟಡದಲ್ಲಿ ಇತಿಹಾಸ ನಿರ್ಮಿಸಿದ ನಮ್ಮ ಪೂರ್ವಿಕ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಸಂವಿಧಾನ್ ಸದನ್’ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಭವಿಷ್ಯದ ಪೀಳಿಗೆಗೆ ಈ ಕಟ್ಟಡದ ಕುರಿತ ಮಹತ್ವದ ತಿಳಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಇದನ್ನೂ ಓದಿ : ಸಂಸತ್ ಭವನದಲ್ಲಿ ಫೋಟೋ ಸೆಷನ್ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಿಜೆಪಿ ಸಂಸದ!

ತಮ್ಮ ಭಾಷಣದ ನಂತರ, ಪ್ರಧಾನಿ ಮೋದಿ ಮತ್ತು ಎಲ್ಲಾ ಸಂಸದರು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಡೆದುಕೊಂಡು ಹೋದರು. ಹೊಸ ಸಂಸತ್ ಭವನಕ್ಕೆ ಪ್ರವೇಶಿಸುವ ವೇಳೆ ಎಲ್ಲಾ ಸಂಸದರು ಸಂವಿಧಾನದ ಪ್ರತಿ, ಸಂಸತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಒಳಗೊಂಡ ಉಡುಗೊರೆ ಚೀಲವನ್ನು ಸ್ವೀಕರಿಸಿದರು.

ಐದು ದಿನಗಳ ಸಂಸತ್ ನ ವಿಶೇಷ ಅಧಿವೇಶನ ಇಂದಿನಿಂದ ಹೊಸ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles