ಬೆಂಗಳೂರು: ಇಂದು ‘ಕರ್ನಾಟಕ ಬಂದ್’ ಹಿನ್ನೆಲೆ ಸ್ಯಾಂಡಲ್‌ವುಡ್ ಬೆಂಬಲ ಸೂಚಿಸಿದ್ದು, ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆಯಾಗಿದೆ. ‘ಕಾವೇರಿ ನಮ್ಮದು’ ಎಂಬ ಚಿತ್ರರಂಗದ ಘೋಷಣೆಯೊಂದಿಗೆ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ಇಂದು ರಾಜ್ಯದಾದ್ಯಂತ ಥಿಯೇಟರ್‌ಗಳು ಹಾಗೂ ಚಿತ್ರೀಕರಣ ಬಂದ್ ಮಾಡಲಾಗಿದ್ದು, ಇಂದು ಬೆಳಗ್ಗೆಯಿಂದ ಯಾವುದೇ ಸಿನಿಮಾ ಪ್ರದರ್ಶನವಿರುವುದಿಲ್ಲ ಆದರೆ ಸಂಜೆ 6 ಗಂಟೆಯ ಬಳಿಕ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಈ ನಡುವೆ ಫಿಲಂ ಚೇಂಬರ್‌ನಿಂದ ಟೌನ್ ಹಾಲ್ ವರೆಗೆ ರ‍್ಯಾಲಿ ಮಾಡಲು ಉದ್ದೇಶಿಸಲಾಗಿದ್ದು, ಈ ವೇಳೆ ಸ್ಯಾಂಡಲ್‌ವುಡ್ ನಟರು ಹಾಜರಿರಲಿದ್ದಾರೆ.
ಇದನ್ನೂ ಓದಿ: Karnataka Bandh; ಅಂಗಡಿ ಮುಚ್ಚಿಸಿ, ಆಟೋಗಳ ತಡೆದ ಪ್ರತಿಭಟನಾಕಾರರು
ನಟ ಶಿವರಾಜ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನಟ-ನಟಿಯರು ಈ ಭಾಗಿಯಾಗುವ ನಿರೀಕ್ಷೆ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.