ವಿಧಾನಸಭೆ : ದೇಶದ ಒಕ್ಕೂಟದ ವ್ಯವಸ್ಥೆಗೆ ವಿರುದ್ಧ ಹೇಳಿಕೆ ನೀಡುವ ಇಂತಹ ವ್ಯಕ್ತಿಗೆ ಕವಡೆ ಕಾಸಿನ ಕಿಮತ್ತಿಲ್ಲ. ಈ ವ್ಯಕ್ತಿಗೆ ನಾವು ಅವರ ಭಾಷೆಯಲ್ಲೇ ಉತ್ತರ ನೀಡಬಹುದು. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೀಳು ಹೇಳಿಕೆ ಶಿವಸೇನೆ ನಾಯಕ ಸಂಜಯ್ ರಾವುತ್ ನೀಡಿದ್ದು, ಅವರನ್ನು ಚೀನಾ ಏಜೆಂಟ್ ಹಾಗೂ ದೇಶದ್ರೋಹಿ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ, ಇಂತಹ ಅವಹೇಳನಕಾರಿ ಟೀಕೆ ಮುಂದುವರೆಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಇದು ಆ ಮನುಷ್ಯನ ಅಪ್ರಬುದ್ಧತೆ ತೋರುತ್ತದೆ. ಇಡೀ ಮಹಾರಾಷ್ಟ್ರದ ನಾಯಕರು ಗಡಿ ವಿಚಾರದಲ್ಲಿ ಅತ್ಯಂತ ಕೆಳಮಟ್ಟದ ಭಾಷೆ ಬಳಸುತ್ತಿದ್ದು, ಅದನ್ನು ಈ ಸದನ ಖಂಡಿಸುತ್ತದೆ.
ಅಲ್ಲಿಯ ನಾಯಕರು ಕರ್ನಾಟಕಕ್ಕೆ ನೀರು ಕೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ನೀರು, ಗಾಳಿಯನ್ನು ಹಿಡಿದಿಡಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರೆಲ್ಲರ ಭಾವನೆ ಒಂದೇ ಎಂದು ಎಚ್ಚರಿಸಿದರು.