Monday, December 4, 2023
spot_img
- Advertisement -spot_img

ಸಂತೋಷ್‌ ಲಾಡ್‌ ದೊಡ್ಡ ವ್ಯಕ್ತಿಯಾಗ್ತಾರೆ ಭವಿಷ್ಯ ನುಡಿದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ

ಬೈಲಹೊಂಗಲ: ಜನಸಾಮಾನ್ಯರಲ್ಲಿ ಸಾಮಾನ್ಯರಂತೆ‌ ಇರುವ ಸಚಿವ ಸಂತೋಷ ಲಾಡ್ ತುಂಬಾನೇ ಸೀದಾ ಸಾದಾ ಮನುಷ್ಯ, ಇವರು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆದು ಮಠಕ್ಕೆ ಬರುತ್ತಾರೆ ಎಂದು ಬೈಲಹೊಂಗಲ ತಾಲೂಕಿನ ನಯಾನಗರ ಸುಕ್ಷೇತ್ರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಜೊತೆ ನನಗೆ ಯಾವುದೇ ಸಂಪರ್ಕ ಇರಲಿಲ್ಲ : ಶೋಭಾ ಕರಂದ್ಲಾಜೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಸುಖದೇವಾನಂದ ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ‌ ಆಗಮಿಸಿದ್ದ ಸಚಿವರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಮಠಕ್ಕೆ ನಡೆದುಕೊಂಡ ಬಂದ ಸಚಿವರು ಎಲ್ಲರಂತೆ ಸಾಮಾನ್ಯರಂತೆ ಇದ್ದಾರೆ.

ಚುನಾವಣೆಗೂ ಮೊದಲು ಸಂತೋಷ ಲಾಡ್ ಮಠಕ್ಕೆ ಬಂದಾಗ ದಾಸೋಹ ಇರಲಿಲ್ಲವಾದ್ರೂ, ಇದ್ದಷ್ಟು ಪ್ರಸಾದ ಸೇವೆ ಮಾಡಿಕೊಂಡು ಹೋಗಿದ್ದರು, ಅಷ್ಟೊಂದು ಸರಳತೆ ಹೊಂದಿರುವ ಲಾಡ್ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಾಸಕನಿಗಿಂತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದು ಹೇಳಿದ್ದಾರೆ.

ಬೈಲಹೊಂಗಲ ತಾಲೂಕಿನ ನಯನಗರ ಸುಕ್ಷೇತ್ರದ ಸುಖದೇವಾನಂದ ಮಠಕ್ಕೆ ಶ್ರಾವಣ ಮಾಸದ ನಿಮಿತ್ತ ಭೇಟಿ‌ ನೀಡಿದ ಸಚಿವರು ಇದೇ ವೇಳೆ ಮಾತನಾಡಿ, ದೇಶದಲ್ಲಿ 130 ವರ್ಷದ ಇತಿಹಾಸದಲ್ಲಿ ಎಂದು ಕಂಡರಿಯದ ಭೀಕರ ಬರಗಾಲ ಇದ್ದು, ಇದು ರಾಜ್ಯಕ್ಕೂ ಆವರಿಸಿದೆ ಎಂದರು.

ರೈತರು ಮಳೆಯಿಲ್ಲದೇ ಕಷ್ಟದಲ್ಲಿದ್ದಾರೆ, 130 ವರ್ಷದ ಇತಿಹಾಸದಲ್ಲಿ ಭಾರತದಲ್ಲಿ ಆಗಸ್ಟ ತಿಂಗಳವರೆಗೂ ಶೇ.31 ರಷ್ಟು ಮಾತ್ರ ಮಳೆಯಾಗಿದೆ. ಭಗವಂತ ಉತ್ತಮ ಮಳೆ ನೀಡಿ ಎಲ್ಲರನ್ನ ರಕ್ಷಿಸಲಿ ಎದು ಬೇಡಿಕೊಂಡರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles