ಹಾಸನ: ಸ್ಯಾಂಟ್ರೋ ರವಿ ಇವತ್ತು ವಿಧಾನಸೌಧಕ್ಕೆ ಬಂದವನಲ್ಲ. ಮೊದಲ ಬಾರಿಗೆ ಕೇಸ್ ದಾಖಲಾಗಿದೆ. ಅವನು ಯಾರು? ಅವನ ಇತಿಹಾಸ ಏನು ನನಗೆ ಗೊತ್ತಿಲ್ಲ. ಸಿಎಂ ಪೂರ್ಣ ವಿವರಗಳನ್ನ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸ್ಯಾಂಟ್ರೋ ರವಿಗೆ ವಿಧಾನಸೌಧ, ಕುಮಾರಕೃಪಾ, ಮಿನಿಸ್ಟರ್‌ಗಳು ಯಾವುದೂ ಹೊಸದಲ್ಲ. ಯಾರೂ ಮಿನಿಸ್ಟರ್ ಆಗ್ತಾರೋ, ಯಾವ ಪಕ್ಷದವರು ಆಗ್ತಾರೋ ಅವರ ಜೊತೆ ಇದ್ದಾನೆ. ಈ ಮಾಹಿತಿಯನ್ನ ಪೊಲೀಸರೇ ಹೇಳಿದ್ದಾರೆ ಎಂದಿದ್ದಾರೆ.
ಹೆಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಗೃಹ ಸಚಿವರ ಜೊತೆ ನಿಂತು ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಎಲ್ಲವೂ ಗೊತ್ತಿದೆ. ಈಗ ಸಾರ್ವಜನಿಕ ಜೀವನದಲ್ಲಿ ಮೊಬೈಲ್ ಬಂದ್ಮೇಲೆ ಯಾರ ಫೋಟೋ ಯಾರು ತೆಗೆದುಕೊಂಡಿರ್ತಾರೆ ಯಾರಿಗೂ ಗೊತ್ತಾಗಲ್ಲ. ಕುಮಾರಸ್ವಾಮಿ ಅವರೂ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡ್ತಾರೆ. ಅದಕ್ಕೆ ಬೆಲೆಯಿಲ್ಲ. ಎಲೆಕ್ಷನ್ ಟೈಮಲ್ಲಿ ವೋಟು ತೆಗೆದುಕೊಳ್ಳುವುದಕ್ಕೋಸ್ಕರ ಮಾತನಾಡುವ ಮಾತಿಗೆ ಬೆಲೆ ಇಲ್ಲ.
ತನಿಖೆಯಲ್ಲಿ ಯಾರು ಬಲಿಪಶು ಆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಎಫ್‌ಐರ್‌ಆರ್ ದಾಖಲಾಗಿದೆ. ನಮ್ಮ ಸರ್ಕಾರ ಯಾವುದೇ ಆರೋಪಿಯನ್ನು ರಕ್ಷಣೆ ಮಾಡುವ ಸರ್ಕಾರ ಅಲ್ಲ ಅವನನ್ನು ಬಂಧನ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.