ಬೆಳಗಾವಿ : ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧಗೊಂಡಿದ್ದು, ಸಿಎಂ ಆಯ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಿಎಂ ಪಟ್ಟದ ಯಾರಿಗೆ ಅಂತಾ ಇನ್ನೂ ನಿರ್ಧಾರವೇ ಆಗಿಲ್ಲ, ಈ ನಡುವೆ ಸ ತೀಶ್ ಜಾರಕಿಹೊಳಿಯವರನ್ನು ಡಿಸಿಎಂ ಮಾಡಿ ಅನ್ನೋ ಕೂಗು ಕೇಳಿ ಬರ್ತಿದೆ. ಜಾರಕಿಹೊಳಿ, ಹೆಬ್ಬಾಳ್ಕರ್ ಮತ್ತು ಸವದಿ ಅವರು ಇತ್ತೀಚಿನ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮೂವರು ಶಾಸಕರೂ ಯಮಕನಮರಡಿ, ಬೆಳಗಾವಿ ಗ್ರಾಮಾಂತರ ಮತ್ತು ಅಥಣಿ ಕ್ಷೇತ್ರಗಳಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಬಹುಸಂಖ್ಯಾತ ಪ್ರದೇಶಗಳಲ್ಲಿ ಸವದಿ ಅವರಿಗೆ ಭಾರಿ ಜನಪ್ರಿಯತೆಯನ್ನು ಗಳಿಸಿದ್ದು, ಹೀಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪಕ್ಷವು ಉತ್ಸುಕವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಶಾಸಕ ಆಸೀಫ್ ಸೇಠ್ ಅವರು, ಸತೀಶ್ ಜಾರಕಿಹೊಳಿ ಯವರನ್ನು ಡಿಸಿಎಂ ಆಗಿ ನೇಮಿಸುವಂತೆ ಪಕ್ಷದ ನಾಯಕರಿಗೆ ಒತ್ತಾಯಿಸಿದರು. ಯಾರನ್ನು ಸಂಪುಟದಲ್ಲಿರಿಸಬೇಕು ಎಂಬುದರ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಿದರು.