ಬೆಂಗಳೂರು: ವೈಯಕ್ತಿಕವಾಗಿ ಡಿಸಿಎಂ ನನಗೆ ಬೇಡ, ಸಚಿವನಾಗಿಯೇ ಇರ್ತೀನಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಅಂತಿಮವಾಗಿ ನಾವೆಲ್ಲರೂ ಕಾಂಗ್ರೆಸ್ನವರೇ, ಸಚಿವ ಸಂಪುಟ ವಿಚಾರದಲ್ಲಿ ಜಾತಿ ಧರ್ಮ ಬ್ಯಾಲೆನ್ಸ್ ಮಾಡಬೇಕು, ಸಿದ್ದರಾಮಯ್ಯಗೆ ಈ ಹಿಂದೆ ಆಡಳಿತ ನೀಡಿದ ಅನುಭವ ಇದೆ, ಅವರ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ. ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಬೇರೆ ಸಮುದಾಯಕ್ಕೆ ಡಿಸಿಎಂ ಕೊಟ್ಟರೆ ನಾನೂ ಕೂಡ ಡಿಸಿಎಂ ಕ್ಲೇಮ್ ಮಾಡ್ತೇನೆ, ನಾಲ್ಕು ಡಿಸಿಎಂ ಆಗೋದಕ್ಕಿಂತ ಒಬ್ಬರೇ ಇದ್ದರೆ ಒಳ್ಳೆಯದು, ಕ್ಯಾಪ್ಟನ್ ಒಬ್ಬರೇ ಇರಬೇಕು. ಇನ್ನು ಮುಂದೆ ಯಾವುದೇ ಗೊಂದಲ ಆಗೋದಿಲ್ಲ. ಡಿಕೆ ಶಿವಕುಮಾರ್ ಡಿಸಿಎಂ ಇರಬಹುದು, ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಲೋಕಸಭೆ ಚುನಾವಣೆ ಕೂಡ ಮಾಡ್ತೇನೆ ಎಂದರು.
ಇನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಜ್ಜಾಗಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ದಲಿತ ಮುಖಂಡ ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸುವ ಮುನ್ನವೇ ಸಿದ್ದರಾಮಯ್ಯ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದು, ಬೆಂಗಳೂರಿನಲ್ಲಿರುವ ನಿವಾಸದ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.