ಬೆಳಗಾವಿ: ಸುದೀಪ್ ಕೇವಲ ಮೂರು ತಾಸಿನ ನಾಯಕ, ಆದ್ರೆ ನಿಜವಾಗಿ ನಿಮ್ಮ ಸೇವೆ ಮಾಡೋರು ನಾವು ಎಂದು ಕೆಪಿಸಿಸಿ ಕಾರ‍್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊನೆಯ ದಿನದ ಪ್ರಚಾರ ನಡೆಸಿ ನಂತರ ಮಾತನಾಡಿ,ಸುದೀಪ್ ಕೇವಲ ಮೂರು ತಾಸಿನ ನಾಯಕ ಅಷ್ಟೇ. ಆದ್ರೆ ನಿಜವಾಗಿ ನಿಮ್ಮ ಸೇವೆ ಮಾಡುವವರು ನಾವು. ಯಾರೋ ನಟ ಬಂದ, ಕಣ್ಣೀರು ಹಾಕಿದ ಮಾತ್ರಕ್ಕೆ ಎಲ್ಲವೂ ಪರಿಹಾರವಾಗಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೊದಲು ಸುದೀಪ್ ನೋಡಬೇಕಂದ್ರೆ ದುಡ್ಡುಕೊಟ್ಟು ಹೋಗಬೇಕಿತ್ತು. ಆದ್ರೆ ಇವತ್ತು ಅವರೇ ಜನರನ್ನ ನೋಡಲು ಬರುತ್ತಿದ್ದಾರೆ ಎಂದಿದ್ದಾರೆ.ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಮಾಡುವುದಾಗಿ ಹೇಳಿದ್ದ ಸುದೀಪ್ ಸಚಿವ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದಾರೆ.