Tuesday, March 28, 2023
spot_img
- Advertisement -spot_img

ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ

ಬೆಳಗಾವಿ: ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶಾಸಕ ಯತ್ನಾಳ್​​ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಗೋಕಾಕ್​ನಲ್ಲಿ ಬೃಹತ್​ ಸಮಾವೇಶ ನಡೆಯಲಿದ್ದು,
2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಹೋರಾಟ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯ ಗೋಕಾಕ್​ ನಗರದ ನ್ಯೂ ಇಂಗ್ಲಿಷ್​ ಶಾಲಾ ಆವರಣದಲ್ಲಿ ಇಂದು ಮಧ್ಯಾಹ್ನ 1ಕ್ಕೆ ನಡೆಯಲಿದೆ.

ಮಾನಸಿಕ ಅಸ್ವಸ್ಥ ಯತ್ನಾಳ್, ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡಿದ ಹಾಗೇ ಇಲ್ಲಿ ಏನಾದ್ರೂ ಗೋಕಾಕ್​ನಲ್ಲಿ ಮಾತನಾಡಿದರೆ ಗೋಕಾಕ್ ಬಿಟ್ಟು ಹೋಗುವುದು ಕಠಿಣ ಆಗುತ್ತೆ ಎಂದಿದ್ದಾರೆ.ಹೋರಾಟದ ಹೊರತುಪಡಿಸಿ ಸತೀಶ್ ಜಾರಕಿಹೊಳಿ ಕುರಿತು ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.


2ಎ ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ನೀನು ಬಂದೆ ಪುಟ್ಟ ಹೋದೆ ಪುಟ್ಟ ಅಷ್ಟೇ ಇರಬೇಕು. ಅದನ್ನ ಬಿಟ್ಟು ಮಾತನಾಡಿದ್ರೇ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ. ನಮ್ಮ ಸಾಹುಕಾರ್ ಹೆಸರು ವೇದಿಕೆ ಮೇಲೆ ತೆಗೆದ್ರೇ ಇದು ನಿನಗೆ ಓಪನ್ ಚಾಲೆಂಜ್. ಧಮ್ ಇದ್ರೇ, ತಾಕತ್ ಇದ್ರೇ ನಮ್ಮ ಸಾಹುಕಾರ್ ಹೆಸರು ವೇದಿಕೆಯಲ್ಲಿ ತೆಗೆ ಆಮೇಲೆ ಇದೆ ನಿನಗೆ ಎಂದು ಸತೀಶ್ ಜಾರಕಿಹೊಳಿ ಬೆಂಬಲಿಗರು ಯತ್ನಾಳ್‌ಗೆ ನೇರವಾಗಿ ಚಾಲೆಂಜ್ ಹಾಕಿದ್ದಾರೆ.

ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದ್ದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಯತ್ನಾಳ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ವಿನಯ್ ಕುಲಕರ್ಣಿ ಸೇರಿ ಹಲವರು ಭಾಗಿಯಾಗಲಿದ್ದಾರೆ.

Related Articles

- Advertisement -

Latest Articles