ಬೆಂಗಳೂರು: ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ’ ಪದದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕೆಲವು ಸಿನಿಮಾ ನಟ-ನಟಿಯರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಟ ಒಳ್ಳೆ ಹುಡ್ಗ ಪ್ರಥಮ್ ನೀಡಿರುವ ಪ್ರತಿಕ್ರಿಯೆ ವೈರಲ್ ಆಗುತ್ತಿದೆ. ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಎರಡರಲ್ಲೂ ಸತೀಶ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಥಮ್, ”ಇದೆಲ್ಲಾ ನೋಡಿಕೊಂಡು ಸುಮ್ಮನಿರೋಕಾಗಲ್ಲ, ನನ್ನ ಸಿನಿಮಾ ಸೋತರೂ ನಾನೊಬ್ಬ ಭಾರತೀಯ, ಹಿಂದು, ಹೆಮ್ಮೆಯ ಕನ್ನಡಿಗ, ನಾಲಿಗೆ ಮೇಲೆ ನಿಗಾ ಇರಲಿ ಸತೀಶ್ ಜಾರಕಿಹೊಳಿ ಎಂದು ಆಕ್ರೋಶ ಹೊರಹಾಕಿದ್ದಾರೆ ಪ್ರಥಮ್.
ಇನ್ನು ಟ್ವಿಟ್ಟರ್‌ನಲ್ಲಿ ಸತೀಶ್‌ರ ಸಹೋದರ ರಮೇಶ್ ಜಾರಕಿಹೊಳಿಯ ವಿಡಿಯೋ ಬಗ್ಗೆ ಪ್ರಸ್ತಾಪಿಸಿ ಬರೆದಿರುವ ಪ್ರಥಮ್, ”ಸತೀಶ್ ಜಾರಕಿಹೊಳಿ ಅವ್ರೆ, ನೀವು ಹಿಂದು ಅಂದ್ರೆ ಅಶ್ಲೀಲ ಅಂದಿದ್ದೀರಾ ನಾನು ನಿಮ್ಗೆ ಕನ್ನಡದಲ್ಲಿ ತಿಳಿಸಿಕೊಡ್ತೀನಿ, ಅಶ್ಲೀಲ ಅಂದ್ರೆ ಹೋದ ವರ್ಷ CD ಬಂತಲ್ಲ? ಅದೇ ಎಗರಿ ಎಗರಿ ಬೀಳ್ತಿದ್ರಲ್ಲಾ? ಅದು ಅಶ್ಲೀಲ. ಹಿಂದು ಅನ್ನೋದಲ್ಲ. ನನ್ನ ಸಿನಿಮಾಸೋತರೂ ನಾನು ಹಿಂದು. ಮುಂದಿನ ಬಾರಿ ಲೈಟ್ ಆಫ್ ಮಾಡಿಕೊಂಡು ಎಗರೋಕೆ ಹೇಳಿ ಅಶ್ಲೀಲತೆ ಕಮ್ಮಿ ಆಗುತ್ತೆ ಎಂದು ಬರೆದುಕೊಂಡಿದ್ದಾರೆ ಪ್ರಥಮ್.
ಯಾವುದಾದ್ರೂ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಜೊತೆ ನೇರವಾಗಿ ಸಿಕ್ಕಿ. ನಿಮ್ಗೆ ಗ್ರಹಚಾರ ಬಿಡಿಸಲಿಲ್ಲ ಅಂದ್ರೆ ನೋಡಿ” ಎಂದು ಆಕ್ರೋಶ ಹೊರಹಾಕಿದ್ದಾರೆ ಪ್ರಥಮ್.