Sunday, October 1, 2023
spot_img
- Advertisement -spot_img

ದೇಶದ್ರೋಹ ಕಾನೂನು ಪ್ರಶ್ನಿಸಿದ್ದ ಅರ್ಜಿಗಳು ಸಂವಿಧಾನ ಪೀಠಕ್ಕೆ ಶಿಫಾರಸು

ನವದೆಹಲಿ : ವಸಾಹತುಶಾಹಿ ಕಾಲದ ದೇಶದ್ರೋಹ ಕಾನೂನಿನ ಸಾವಿಂಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಿದೆ.

ವಿಸ್ತೃತ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸುವುದನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಐವರು ನ್ಯಾಯಮೂರ್ತಿಗಳ ಪೀಠ ರಚನೆಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ಸಿಜೆಐ ಡಿ.ವೈ ಚಂದ್ರಚೂಡ್ ಅವರಿಗೆ ದಾಖಲೆಗಳನ್ನು ನೀಡುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ : ಮಣಿಪುರದಲ್ಲಿ ಉಗ್ರರ ಗುಂಡೇಟಿಗೆ ಕುಕಿ-ಝೋ ಬುಡಕಟ್ಟಿನ ಮೂವರು ಬಲಿ!

ವಸಾಹತು ಕಾಲದ ದೇಶದ್ರೋಹ ಕಾನೂನನ್ನು ಮರು ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಈ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ 1ರಂದು ಮುಂದೂಡಿತ್ತು.

ಕಳೆದ ತಿಂಗಳು ಮಹತ್ವದ ನಡೆಯಲ್ಲಿ ಕೇಂದ್ರ ಸರ್ಕಾರವು, ಬ್ರಿಟಿಷರ ಕಾಲದಿಂದ ಮುಂದುವರಿದು ಬಂದಿರುವ ಮೂರು ಅಪರಾಧ ಕಾನೂನುಗಳನ್ನು ಬದಲಿಸುವ ಹೊಸ ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿತ್ತು.

ಸರ್ಕಾರದ ಸಮಿತಿಯು ದೇಶದ್ರೋಹ ಕಾನೂನನ್ನು ಮರು ಪರಿಶೀಲನೆ ನಡೆಸುವವರೆಗೂ, ಆದರ ನಿಯಮಗಳಡಿ ಯಾವುದೇ ಹೊಸ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಳೆದ ವರ್ಷದ ಮೇ 11ರಂದು ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಕಾನೂನಿಗೆ ತಡೆ ನೀಡಿತ್ತು. ಈಗಾಗಲೇ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ವಿಚಾರಣೆಗೂ ತಡೆ ನೀಡುವಂತೆ ಎಲ್ಲಾ ನ್ಯಾಯಾಲಯಗಳಿಗೆ ಸೂಚನೆ ನೀಡಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles