ಚಿಕ್ಕಮಗಳೂರು : ಅಧಿಕಾರಿಗಳ ಸಭೆ ವೇಳೆ ಶಾಲೆಯ ಮುಖ್ಯ ಶಿಕ್ಷಕಿಯ ಮೈಮೇಲೆ ದೇವರು ಬಂದ ವಿಚಿತ್ರ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದಿದೆ.
ಅಡಳಿತಾತ್ಮಕವಾಗಿ ಲೋಪದ ದೂರು ಬಂದ ಹಿನ್ನೆಲೆ, ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿದ್ದರು. ಮುಖ್ಯ ಶಿಕ್ಷಕಿಯಿಂದ ಮಾಹಿತಿ ಪಡೆಯಲು ಮುಂದಾಗುತ್ತಿದ್ದಂತೆ, ಶಿಕ್ಷಕಿಯ ಮಾತಿನಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ಆಕೆಯ ಮೈಮೇಲೆ ದೇವರ ಆವಾಹನೆ ಆಗಿದೆ.
ಮೈಮೇಲೆ ದೇವರು ಬರುತ್ತಿದ್ದಂತೆ ಅಬ್ಬರಿಸಿದ ಶಿಕ್ಷಕಿ, ಮಾಜಿ ಶಾಸಕ ಬಿ.ಬಿ ನಿಂಗಯ್ಯ ರಕ್ತಕಾರಿ ಸಾಯ್ತಾನೆ, ಅವನನ್ನು ಬಿಡಲ್ಲ. ನಾನು ಯಾರನ್ನೂ ಬಿಡಲ್ಲ, 9 ಜನರನ್ನು ಬಲಿ ಪಡೆಯುತ್ತೇನೆ. ಮೊದಲು ದೇವಸ್ಥಾನ ಕಟ್ಟಿ ನಂತರ ಶಾಲೆ ನಡೆಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಝೀರೋ ಬಿಲ್ ಜೊತೆಗೆ ಈಗ ಝೀರೋ ಕರೆಂಟ್ ಆಗಿದೆ : ನಳಿನ್ ಕುಮಾರ್ ಕಟೀಲ್
ಇದು ನಮ್ಮ ಜಾಗ, ನಮಗೆ ಪದೇ ಪದೇ ತೊಂದರೆ ಕೊಡಲಾಗ್ತಿದೆ. ಇನ್ನೊಮ್ಮೆ ನಮಗೆ ಸಮಸ್ಯೆ ಮಾಡಿದರೆ ಸುಮ್ಮನೆ ಬಿಡಲ್ಲ. ಮೊದಲು ನಮಗೆ ನೆಲೆ ಕಲ್ಪಿಸಿ, ಆಮೇಲೆ ಶಾಲೆ ನಡೆಸಿ. ದೇವಸ್ಥಾನ ಆಗದೆ ಶಾಲೆ ನಡೆಸಲು ಬಿಡಲ್ಲ. ನಿಂಗಯ್ಯ (ಮಾಜಿ ಶಾಸಕ) ನನ್ನ ಬಲಿ ತಗೊಂಡೆ ತಗೋತೀನಿ ಎಂದೆಲ್ಲ ಶಿಕ್ಷಕಿ ಮಾತನಾಡಿದ್ದಾರೆ.
ಮುಖ್ಯ ಶಿಕ್ಷಕಿಯ ಮಾತು ಕೇಳಿ ಸ್ಥಳದಲ್ಲಿದ್ದ ಬಿಇಓ ಹಾಗೂ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ. ಏನು ಮಾಡುವುದು ಎಂದು ತೋಚದೆ ಆಕೆಯ ವರ್ತನೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಶಿಕ್ಷಕಿಯ ಮೈಮೇಲೆ ಬಂದಿದ್ದು, ದೇವರೋ ದೆವ್ವವೋ ಎಂಬ ಗೊಂದಲದಲ್ಲಿರುವ ಗ್ರಾಮಸ್ಥರು, ಭಯಭೀತರಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.