ನವದೆಹಲಿ : ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯ ಕಲಾಪಗಳು ಇಂದಿನಿಂದ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ.
ನಿನ್ನೆ (ಸೆ.18) ಹಳೆಯ ಸಂಸತ್ ಕಟ್ಟಡದಲ್ಲಿ ಕೊನೆಯ ಅಧಿವೇಶನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರು ಮಾತನಾಡಿ, ಕಳೆದ 75 ವರ್ಷದ ಭಾರತದ ಪ್ರಜಾಪ್ರಭುತ್ವದ ಪಯಣ ಮತ್ತು ಹಳೆಯ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ : ಐತಿಹಾಸಿಕ ಸ್ಮಾರಕವಾದ ಹಳೆ ಸಂಸತ್ ಕಟ್ಟಡ
ಒಟ್ಟು ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ಟಾ’ದಲ್ಲಿ ಕಲಾಪಗಳು ನಡೆಯಲಿವೆ. ಇಂದು ಲೋಕಸಭೆ ಕಲಾಪ ಮಧ್ಯಾಹ್ನ 1 :15ಕ್ಕೆ ಮತ್ತು ರಾಜ್ಯಸಭೆ ಕಲಾಪ 2:15ಕ್ಕೆ ಪ್ರಾರಂಭವಾಗಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.