ನವದೆಹಲಿ: ಇಂದಿನಿಂದ ಆರಂಭಗೊಂಡಿರುವ ಸಂಸತ್ ವಿಶೇಷ ಅಧಿವೇಶನ ಮುಂದೂಡಲಾಗಿದೆ. ಇಂದಿನಿಂದ ಆರಂಭವಾದ ಸಂಸತ್ತಿನ ವಿಶೇಷ ಅಧಿವೇಶನವು ನಾಳೆಯಿಂದ ನೂತನ ಸಂಸತ್ ಭವನದಲ್ಲಿ ಮುಂದುವರಿಯಲಿದೆ.
ಮಂಗಳವಾರ ಮಧ್ಯಾಹ್ನ 1.15ಕ್ಕೆ ಹೊಸ ಕಟ್ಟಡದ ಹೊಸ ಚೇಂಬರ್‌ನಲ್ಲಿ ಲೋಕಸಭೆ ಕಲಾಪ ಆರಂಭಗೊಂಡರೆ ಒಂದು ಗಂಟೆಯ ನಂತರ 2:15ಕ್ಕೆ ರಾಜ್ಯಸಭೆ ಕಲಾಪ ಆರಂಭವಾಗಲಿದೆ. ಇಂದು ಸಂಸತ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಹಳೆಯ ಕಟ್ಟಡ ಕುರಿತು ನೆನಪುಗಳ ಹಂಚಿಕೊಂಡಿದ್ದರು.
ಇದನ್ನೂ ಓದಿ: ಪಾಕ್ ಮಾಜಿ ಸಿಎಂ ಇಮ್ರಾನ್ ಖಾನ್ ಪಕ್ಷದ ಹಾಡು ಕದ್ದ ಕಾಂಗ್ರೆಸ್; ಬಿಜೆಪಿ ಆರೋಪ
ಹಳೆಯ ಸಂಸತ್ ಕಟ್ಟಡಕ್ಕೆ ತಾನು ಮೊದಲ ಬಾರಿಗೆ ಪ್ರವೇಶಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಅದು ಭಾವನಾತ್ಮಕ ಕ್ಷಣವಾಗಿತು. ಜನರಿಂದ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದರು.


75 ವರ್ಷಗಳ ಸಂಸದೀಯ ಪಯಣ ನೆನೆದ ಪ್ರಧಾನಿ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡರು. ಪಂಡಿತ್ ನೆಹರು ನಮಗೆ ‘ಸ್ಫೂರ್ತಿ’ ಎಂದು ಹೇಳಿದರು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ, ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಸಂವಿಧಾನದ ವಿಧಿ 370ರ ರದ್ದು ಇತ್ಯಾದಿ ಹಳೆಯ ಸಂಸತ್ ಕಟ್ಟಡದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ‘ಬಿಜೆಪಿ ಜೊತೆ ಮೈತ್ರಿ ಇಲ್ಲ’; ಶಾಕ್ ಕೊಟ್ಟ ಎಐಎಡಿಎಂಕೆ!
ಹಳೆಯ ಸಂಸತ್ ಕಟ್ಟಡದ ಕುರಿತು ಮಾತನಾಡಿದ ಪ್ರಧಾನಿ, ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ. ಅನೇಕ ಕಹಿ-ಸಿಹಿ ನೆನಪುಗಳು ಇದರೊಂದಿಗೆ ಸೇರಿಕೊಂಡಿವೆ. ನಾವೆಲ್ಲರೂ ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಸಾಕ್ಷಿಯಾಗಿದ್ದೇವೆ. ಅದೇ ಸಮಯದಲ್ಲಿ ನಮ್ಮಲ್ಲಿ ‘ಪರಿವಾರ ಭಾವ’ವನ್ನು ನೋಡಿದ್ದೇವೆ. ಈ ಎಲ್ಲಾ ನೆನಪುಗಳು ನಮ್ಮ ಹಂಚಿಕೆಯ ಪರಂಪರೆಗೆ ಸಾಕ್ಷಿಯಾಗಿವೆ ಎಂದರು.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.