ಯಾದಗಿರಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್ ನಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೌಲಭ್ಯವಿಲ್ಲದೆ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದೇ ಖ್ಯಾತಿಯಾದ ಯಾದಗಿರಿಯಲ್ಲಿ ಶಿಕ್ಷಣ ಪಡೆಯಬೇಕೆಂದರೆ ವಿದ್ಯಾರ್ಥಿಗಳು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಆರ್. ಹೊಸಳ್ಳಿ ತಾಂಡಾ, ಆಶಾಪುರ ತಾಂಡಾ, ಗಿದ್ದಬಂಡಿ ತಾಂಡಾದ ವಿದ್ಯಾರ್ಥಿಗಳು ಪ್ರತಿದಿನ 8 ಕಿಮಿ ದೂರವಿರುವ ಎಲ್ಹೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ತೆರಳಲು ಪರದಾಡುವಂತಾಗಿದೆ.
ಇದನ್ನೂ ಓದಿ; ಶಾಸಕರು-ಸಚಿವರ ದಿಢೀರ್ ಸಭೆ ಕರೆದ ಸಿಎಂ; ಏನೆಲ್ಲಾ ಚರ್ಚೆಯಾಗಲಿದೆ?
ಮಳೆ ಬಂದ್ರೆ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಂಕಷ್ಟ ಎದುರಿಸುತ್ತಾರೆ. ನಿತ್ಯವೂ ನಡೆದುಕೊಂಡು ಶಾಲೆಗೆ ತೆರಳುತ್ತಾರೆ ಮಾರ್ಗ ಮಧ್ಯದಲ್ಲಿ ಯಾವುದಾದರೂ ಟ್ರಾಕ್ಟರ್ ಹಾಗೂ ಬೇರೆ ವಾಹನ ಬಂದರೆ ಆ ವಾಹನಗಳಲ್ಲಿ ಶಾಲೆಗೆ ವಿದ್ಯಾರ್ಥಿಗಳು ತೆರಳುವುದು ಅನಿವಾರ್ಯವಾಗಿದೆ. ಇಂದು ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯದ ನಡುವೆ ಟ್ರಾಕ್ಟರ್ ನಲ್ಲಿ ಶಾಲೆಗೆ ತೆರಳಿದರು.
ಟ್ರಾಕ್ಟರ್ ಟ್ರಾಲಿಯಲ್ಲಿ ಜಾಗವಿಲ್ಲದ್ದಕ್ಕೆ ಟ್ರಾಕ್ಟರ್ ಮುಂಭಾಗದಲ್ಲಿ ಕುಳಿತು ವಿದ್ಯಾರ್ಥಿಗಳು ಸಂಚಾರ ಮಾಡಿದರು. ವಿದ್ಯಾರ್ಥಿಗಳ ಹಿತ ಕಾಪಾಡಬೇಕಾದ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಮಕ್ಕಳ ಬಗ್ಗೆ ಕಾಳಜಿ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.