Wednesday, May 31, 2023
spot_img
- Advertisement -spot_img

ಶಾಸಕ ರೇಣುಕಾಚಾರ್ಯಗೆ ಸೋಲು ಖಚಿತ : ‘ಕೈ’ ಅಭ್ಯರ್ಥಿ ಶಾಂತನಗೌಡ

ದಾವಣಗೆರೆ : ಈ ಬಾರಿ ಹೊನ್ನಾಳಿ ಮತಕ್ಷೇತ್ರದ ಶಾಸಕ ರೇಣುಕಾಚಾರ್ಯಗೆ ಸೋಲು ಖಚಿತ ಎಂದು ಕೈ ಅಭ್ಯರ್ಥಿ ಶಾಂತನಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಶಾಸಕ ರೇಣುಕಾಚಾರ್ಯ ಸೋಲಲು ದುರಾಡಳಿತ, ಭ್ರಷ್ಟಾಚಾರ ಕಾರಣವಾಗುತ್ತದೆ ಎಂದರು.ಈ ಬಾರಿ ರೇಣುಕಾಚಾರ್ಯ ಸೋಲಲಿದ್ದು, ನನಗೆ ಎಲ್ಲ ವರ್ಗದ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಾವಿರಾರು ಉತ್ತಮ ಮನೆಗಳನ್ನು ಕೆಡವಿ ಕಾರ್ಯಕರ್ತರಿಗೆ 5 ಲಕ್ಷ ಹಣ ಕೊಡಿಸಿದ್ದಾರೆ, ನಾನು ಹೊನ್ನಾಳಿ ಕ್ಷೇತ್ರದಿಂದ ನೂರಕ್ಕೆ ನೂರು ಶೇಕಡಾ ಗೆದ್ದೇ ಗೆಲ್ಲುತ್ತೇನೆ ಎಂದು ತಿಳಿಸಿದರು. ನನ್ನ ಕುಟುಂಬದವರೆಲ್ಲ ಶಾಸಕರಾಗಿದ್ದೇವೆ, 50 ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲ ಜಾತಿ ಧರ್ಮದವರ ಪ್ರೋತ್ಸಾಹ ಸಿಕ್ಕಿದೆ, ಈ ಬಾರಿ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಬಾರಿಯ ಎಲೆಕ್ಷನ್ ನಲ್ಲಿ ನಾನೇ ಗೆಲ್ಲುತ್ತೇನೆ , ಕಾಂಗ್ರೆಸ್ ನವರು ಶುಭಾಶಯ ಹೇಳಿಕೊಳ್ಳಲಿ , ಶನಿವಾರ ವಿಜಯೋತ್ಸವ ನಾವು ಆಚರಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದರು. ಕಾಂಗ್ರೆಸ್ ನವರು ಏನಾದ್ರೂ ಹೇಳಿಕೊಳ್ಳಲಿ, ನನಗೆ ವಿಶ್ವಾಸ ಇದೆ, ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂದರು.

Related Articles

- Advertisement -

Latest Articles