ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಪಕ್ಷಾಂತರಿಗಳ ವಿರುದ್ಧ ‘ಗೆರಿಲ್ಲಾ ಯುದ್ಧ ತಂತ್ರ’ದೊಂದಿಗೆ ಹೋರಾಡುತ್ತಿದ್ದಾರೆ’ ಎಂದು ಶಿವಸೇನಾ ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ರಾವುತ್, ‘ಎನ್‌ಸಿಪಿ ಮುಖ್ಯಸ್ಥರಾದ ಪವಾರ್ ಯುದ್ಧಭೂಮಿಯಲ್ಲಿ ಬಿಜೆಪಿಯೊಂದಿಗೆ ಹೋರಾಡುತ್ತಿದ್ದಾರೆ. ಪಕ್ಷ ತೊರೆದ ಅವರ ಸಹಚರರ ವಿರುದ್ಧ ಹೋರಾಡಲು ಗೆರಿಲ್ಲಾ ಯುದ್ಧ ತಂತ್ರಗಳನ್ನು ಆರಿಸಿಕೊಂಡಿದ್ದಾರೆ’ ಎಂದರು.
‘ಶರದ್ ಪವಾರ್ ಎಂದಿಗೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ; ಅವರು ಮಹಾ ವಿಕಾಸ್ ಅಘಾಡಿ ಮತ್ತು ‘ಇಂಡಿಯಾ (INDIA) ಒಕ್ಕೂಟದ ಪ್ರಮುಖ ನಾಯಕರಾಗಿದ್ದಾರೆ. ಇದರರ್ಥ ಅವರು ಈಗ ಎರಡು ಕಲ್ಲುಗಳ ಮೇಲೆ ನಿಂತಿದ್ದಾರೆ ಎಂದಲ್ಲ. ಶರದ್ ಪವಾರ್ ನಿಲುವಿನ ಬಗ್ಗೆ ಯಾರಿಗೂ ಯಾವುದೇ ಗೊಂದಲವಿಲ್ಲ’ ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ; ಸೂರ್ಯ, ಶುಕ್ರನತ್ತ ತೆರಳಲು ಇಸ್ರೋ ಸಿದ್ಧತೆ; ಅನುರಾಗ್ ಠಾಕೂರ್
ಜುಲೈ 2 ರಂದು, ಮಾಜಿ ಎನ್‌ಸಿಪಿ ನಾಯಕ ಮತ್ತು ಈಗ ಉಪಮುಖ್ಯಮಂತ್ರಿ ಆಗಿರುವ ಅಜಿತ್ ಪವಾರ್, ಎಂಟು ಜನ ಶಾಸಕರೊಂದಿಗೆ ಆಡಳಿತಾರೂಢ ಏಕನಾಥ್ ಶಿಂಧೆ-ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಸೇರಿಕೊಂಡರು. ಅಜಿತ್ ಈ ನಡೆಯಿಂದ ಎನ್‌ಸಿಪಿ ವಿಭಜನೆಗೆ ಕಾರಣವಾಯಿತು.
ಜುಲೈ 3 ರಂದು, ಶರದ್ ಪವಾರ್-ನಿಷ್ಠಾವಂತ ಎನ್‌ಸಿಪಿಯ ರಾಜ್ಯಾಧ್ಯಕ್ಷ ಮತ್ತು ಪಕ್ಷದ ಶರದ್ ಪವಾರ್ ಬಣದಲ್ಲಿ ಉಳಿದಿರುವ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದ ಶಾಸಕ ಜಯಂತ್ ಪಾಟೀಲ್; ಮತ್ತು ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಪಕ್ಷದ ಮುಖ್ಯ ಸಚೇತಕ ಮತ್ತು ಜಲಗಾಂವ್ ಜಿಲ್ಲೆಯ ಅಮಲ್ನೇರ್‌ನ ಶಾಸಕರಾಗಿರುವ ಅಜಿತ್ ಪವಾರ್ ಬಣದ ಬಂಡಾಯ ನಾಯಕ ಅನಿಲ್ ಪಾಟೀಲ್ ಇಬ್ಬರೂ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಮುಂದೆ ಪರಸ್ಪರ ಅನರ್ಹಗೊಳಿಸುವಂತೆ ಕೋರಿಮನವಿ ಇಟ್ಟಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.