Sunday, March 26, 2023
spot_img
- Advertisement -spot_img

ಶರದ್‌ ಪವಾರ್‌ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಮುಂಬೈ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಶರದ್‌ ಪವಾರ್ ರನ್ನು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಅವರನ್ನು ಮುಂದಿನ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಲಾಗುವುದು ಎಂದು ಹೇಳಲಾಗಿದೆ.

ನವಂಬರ್‌ 4 ಮತ್ತು 5 ತಾರೀಖಿನಂದು ಶಿರಡಿಯಲ್ಲಿ ನಡೆಯುವ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು NCP ಟ್ವೀಟ್‌ ಮಾಡಿ ತಿಳಿಸಿದೆ. ಈ ಮಧ್ಯೆ ನವೆಂಬರ್ 4 ಮತ್ತು 5 ರಂದು ಶಿರಡಿಯಲ್ಲಿ ನಡೆಯುವ ಎನ್.ಸಿ.ಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷಗಳು ಸ್ಪಷ್ಟಪಡಿಸಿವೆ. ಪವಾರ್‌ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರೇ ಹೇಳಿದ್ದರು.

ನವೆಂಬರ್ 2 ರಂದು ಡಿಸ್ಟಾರ್ಜ್ ಆಗಲಿದ್ದಾರೆ ಎಂದು ಎನ್‌ ಸಿ ಪಿ ಪ್ರಧಾನ ಕಾರ್ಯದರ್ಶಿ ಶಿವಾಜಿರಾವ್ ಗರ್ಜೆ ಮಾಹಿತಿ ನೀಡಿದ್ದಾರೆ.ಈ ಅವಧಿಯಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಆವರಣದಲ್ಲಿ ನೂಕುನುಗ್ಗಲು ಉಂಟಾಗದಂತೆ ಎನ್ ಸಿ ಪಿ ಕಾರ್ಯಕರ್ತರಿಗೆ , ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Related Articles

- Advertisement -

Latest Articles