ರಾಮನಗರ : ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಗೆ ಭವಿಷ್ಯವಿಲ್ಲ ,ಎಎಪಿ ಕೇವಲ 10 ವರ್ಷದಲ್ಲಿ ರಾಷ್ಟ್ರೀಯ ಪಕ್ಷವಾಗಿ ಬೆಳೆದಿರುವುದು ತುಂಬಾ ಸಂತೋಷದ ವಿಚಾರ ಎಂದು ಎಎಪಿ ಸೇರ್ಪಡೆಯಾದ ಡಿಕೆಶಿ ಸಹೋದರಿ ಪತಿ ಶರತ್ ಚಂದ್ರ ಅಭಿಪ್ರಾಯಪಟ್ಟರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕಳೆದ ತಿಂಗಳು ಅಂದರೆ ಜನವರಿ 30 ರಂದು ಕಾಂಗ್ರೆಸ್ ತೊರೆದು ಎಎಪಿ ಪಕ್ಷಕ್ಕೆ ಸೇರ್ಪಡೆ ಗೊಂಡೆ ಎಂದು ಹೇಳಿದರು. ನಾನು ಕಾಂಗ್ರೆಸ್ ತೊರೆಯಬಾರದು ಎಂದು ತುಂಬಾ ಒತ್ತಡವಿತ್ತು ಮತ್ತು ಅಂದು ನನ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರು , ಅವರಿಂದ ತಪ್ಪಿಸಿಕೊಂಡು ಕೆಲ ಬೆಂಗಳೂರು ಸ್ನೇಹಿತರೊಂದಿಗೆ ಎಎಪಿ ಕಛೇರಿಗೆ ಬಂದು ಪಕ್ಷ ಸೇರ್ಪಡೆ ಗೊಂಡೆ ಎಂದರು.
ನನಗೆ ರಾಜಕೀಯ ಆಕಸ್ಮಿಕ ನಾನು 2013 ರ ಲೋಕಸಭೆ ಬೈ ಎಲೆಕ್ಷನ್ ವೇಳೆ ಡಿ.ಕೆ ಸುರೇಶ್ ಕುಮಾರ್ ಲೋಕಸಭೆ ಚುನಾವಣೆಗೆ ನಮಗೆ ಸಹಾಯಮಾಡಿ ಬನ್ನಿ ಎಂದು ಸಹಾಯ ಕೋರಿದ್ದರಿಂದ ರಾಜಕೀಯಕ್ಕೆ ಬಂದೆ ಎಂದರು. ಇದರ ನಡುವೆ ಸಿ.ಪಿ.ಯೋಗೇಶ್ವರ್ ಪಕ್ಷತೊರೆದು ಬೇರೆ ಪಕ್ಷ ಸೇರಿದಾಗ ನನಗೆ ಚನ್ನಪಟ್ಟಣ ಟಿಕೇಟ್ ಕೊಡುವುದಾಗಿ ಹೇಳಿದರು ,
ಎಐಸಿಸಿ ಗೆ ನನ್ನ ಹೆಸರು ಶಿಫಾರಸ್ಸು ಆದರೂ ಕೂಡಾ ಕಾಂಗ್ರೆಸ್ ನ ಹೈಕಮಾಂಡ್ ನೀತಿ ಯಿಂದಾಗಿ ನನಗೆ ಟಿಕೆಟ್ ತಪ್ಪಿತು ಆದರೂ ನಾನು ಪಕ್ಷಕ್ಕಾಗಿ ಸೇವೆ ಸಲ್ಲಿಸಿದೆ. ಈ ಬಾರಿಯೂ ಕೂಡ ಕಾರ್ಯಕರ್ತರು ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಹೈಕಮಾಂಡ್ ಗೆ ಒತ್ತಡ ಹೇರಿದರೂ ಆದರೆ ಕುಟುಂಬ ರಾಜಕಾರಣವಾಗುತ್ತೆ ಎಂಬ ನೆಪ ಹೇಳಿ ನನಗೆ ಬೇರೆ ಜವಾಬ್ದಾರಿ ನೀಡುತ್ತೇವೆ ಎಂದರು. ನನಗೆ ಬೇಸರವಾಯಿತು, ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಧಾನ ಸರಿ ಇಲ್ಲ ಟಿಕೆಟ್ ನಿರ್ಧಾರವಾಗಬೇಕಿರುವುದು ಕಾರ್ಯಕರ್ತರು ಮತ್ತು ಜನಾಭಿಪ್ರಾಯದಿಂದ ಹೊರತಾಗಿ ಹೈಕಮಾಂಡ್ ನಿಂದಲ್ಲ ಎಂದು ಹೇಳಿದರು.
ಎಎಪಿ ಅತಿ ಬೇಗನೇ ರಾಷ್ಟ್ರೀಯ ಪಕ್ಷವಾಗಲು ಕಾರಣ ಜನರ ತೆರಿಗೆ ಹಣ ಸರಿಯಾಗಿ ಜನರಿಗೆ ಮುಟ್ಟಿಸುತ್ತಿರುವ ಕಾರಣ ಮತ್ತು ಅಭಿವೃದ್ಧಿ ಇದರಿಂದ ಎಎಪಿ “ಪ್ಯೂಚರ್ ಅಫ್ ಇಂಡಿಯಾ” ಪಕ್ಷವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.