ನವದೆಹಲಿ: ಕುರಿ-ಮೇಕೆಗಳು ಸಿಂಹದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಕಾಡಿನಲ್ಲಿ ಸಿಂಹದ ಎದುರು ಕುರಿ-ಮೇಕೆಗಳು ಹೋರಾಡಿ ಗೆಲ್ಲುತ್ತವೆಯೇ? ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ಬಗ್ಗೆ ಮಾತ್ರ ಯೋಚಿಸುತ್ತವೆ. ವಿರೋಧ ಪಕ್ಷಗಳನ್ನು ರಣಹದ್ದುಗಳು ಎಂದು ಕರೆಯುವುದಿಲ್ಲ ಆದರೆ ಕಾಡಿನಲ್ಲಿ ಸಿಂಹದ ವಿರುದ್ಧ ಹೋರಾಡಲು ಕುರಿ ಮತ್ತು ಮೇಕೆಗಳು ಒಟ್ಟಾಗಿ ಬರುವುದಿಲ್ಲ. ಸಿಂಹವು ಯಾವಾಗಲೂ ಸಿಂಹವಾಗಿರುತ್ತದೆ. ಅದರೊಂದಿಗೆ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: BREAKING: ಕರ್ನಾಟಕಕ್ಕೆ ಮತ್ತೆ ಸೋಲು! ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ CWMA ಆದೇಶ
ಮಹಾರಾಷ್ಟ್ರದಲ್ಲಿ 48 ಸ್ಥಾನ ಗೆಲ್ಲಲು ನಾವು ತಂತ್ರ ರೂಪಿಸುತ್ತೇವೆ. ಇದಕ್ಕಾಗಿ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಜನರು ತಮ್ಮ ಪರ ಕೆಲಸ ಮಾಡುವವರು ಬೇಕೋ ಅಥವಾ ಮನೆಯಲ್ಲಿ ಕುಳಿತುಕೊಳ್ಳುವವರು ಬೇಕೋ ಎಂಬುದನ್ನು ನಿರ್ಧರಿಸುತ್ತಾರೆ.
ಒಂದು ಕಾಲದಲ್ಲಿ 400 ಸ್ಥಾನ ಗಳಿಸಿದ್ದ ಕಾಂಗ್ರೆಸ್ 40 ಸ್ಥಾನಕ್ಕೆ ಕುಸಿದಿದೆ. ಭಾರತವನ್ನು ಸೂಪರ್ ಪವರ್ ಸ್ಥಾನಮಾನದತ್ತ ಕೊಂಡೊಯ್ಯುತ್ತಿರುವ ಕಾರಣಕ್ಕೆ ಜನರು ಪ್ರಧಾನಿ ಮೋದಿ ಜೊತೆಗಿದ್ದಾರೆ ಎಂದರು.
ಇದನ್ನೂ ಓದಿ: ‘ಭಾರತ ಮಾತೆ’ ಲುಕ್ ನಲ್ಲಿ ಸೋನಿಯಾ ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕೆಂಡಾಮಂಡಲ
ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವ ಶಕ್ತಿ ಪ್ರಧಾನಿ ಮೋದಿಯವರಿಗೆ ಮಾತ್ರ ಇದೆ. ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಶಾಲೆಗಳು ಪ್ರಾರಂಭವಾಗಿವೆ ಮತ್ತು ಜನರ ಜೀವನ ಸುಧಾರಿಸಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.