Thursday, June 8, 2023
spot_img
- Advertisement -spot_img

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಉದ್ಯೋಗ ಅವಕಾಶ ಸೃಷ್ಟಿ : ಸಿಎಂ ಬಸವರಾಜ ಬೊಮ್ಮಾಯಿ

ಶಿವಮೊಗ್ಗ: ವಿಮಾನ ನಿಲ್ದಾಣದಿಂದ ಕೇವಲ ಸಂಚಾರಕ್ಕೆ ಮಾತ್ರವಲ್ಲದೆ ಯುವಜನತೆಗೆ ಉದ್ಯೋಗ, ಆರ್ಥಿಕತೆಗೆ ಹೊಸ ದಿಕ್ಕು, ಹೊಸ ಅವಕಾಶ ಮಾಡಿಕೊಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕರ್ನಾಟಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್​ಪೋರ್ಟ್​ ಉದ್ಘಾಟನೆ ಒಂದು ಮೈಲಿಗಲ್ಲು. ಯಡಿಯೂರಪ್ಪನವರ ಪರಿಶ್ರಮದಿಂದ ಏರ್​​ಪೋರ್ಟ್ ಆಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಸರ್ಕಾರದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಆಗ್ತಿದೆ. ಉಡಾನ್​ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಯಡಿಯೂರಪ್ಪರವರ ಹುಟ್ಟುಹಬ್ಬದ ದಿನವೇ ಏರ್​ಪೋರ್ಟ್ ಉದ್ಘಾಟನೆಯಾಗುತ್ತಿದ್ದು ಇದು ದೈವ ಇಚ್ಛೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಏರ್ ಪೋರ್ಟ್ ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ , ಜೊತೆಗೆ ಸೂರ್ಯ-ಚಂದ್ರರು ಇರುವವರೆಗೂ ಕರ್ನಾಟಕ ಇತಿಹಾಸದಲ್ಲಿ ಯಡಿಯೂರಪ್ಪನವರ ಹೆಸರು ಶಾಶ್ವತವಾಗಿ ಉಳಿಯುತ್ತದೆ, ಮಲೆನಾಡಿಗೆ ಪ್ರದೇಶಕ್ಕೆ ಯಡಿಯೂರಪ್ಪ ಒಂದು ಕಾಣಿಕೆ ಎಂದು ಅಭಿಪ್ರಾಯಪಟ್ಟರು.

ತಂತ್ರಜ್ಞಾನ, ಸಂಶೋಧನೆಯಲ್ಲಿ ಕರ್ನಾಟಕ ನಂಬರ್ 1 ಇದೆ, ವಿಜಯಪುರ, ಹಾಸನ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

Related Articles

- Advertisement -spot_img

Latest Articles