ರಾಯಚೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಒಬ್ಬ ಪತ್ನಿ ಅಲ್ಲ ಇರೋದು, ಏಳು ಜನ ಪತ್ನಿಯರು ಇದ್ದಾರೆ ಎಂದು ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಮಾಜಿ ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಕುಟುಂಬದ ಜಗಳ ಸರಿಪಡಿಸಿಕೊಳ್ಳದವರು, ಶಿವನಗೌಡ ನಾಯಕನನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ , ಒಂದು ಕಡೆ ಮಗ ಸೋತ, ಇನ್ನೊಂದು ಕಡೆ ತಂದೆ ದೇವಗೌಡರು ಸೋತರು. ಇಷ್ಟಾದರೂ ನಿಮಗೆ ಬುದ್ದಿಯಿಲ್ಲ ಇನ್ನೊಬ್ಬರನ್ನ ಬಂದು ಸೋಲಿಸುತ್ತಾನಂತೆ ಎಂದು ಕಿಡಿಕಾರಿದರು.
ನಿಜವಾಗಲೂ ಗಂಡಸ್ತನ ಇದ್ದರೆ ಈ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನ ಶಕ್ತಿಯನ್ನು ಸಾಬೀತು ಮಾಡಿ ತೋರಿಸು, ಇಡೀ ಜಿಲ್ಲೆಯಲ್ಲಿ ಶಿವನಗೌಡ ಸೋಲಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ನಾನು ಒಂದುವರೆ ಲಕ್ಷ ಮತಗಳಿಂದ ಗೆದ್ದು ತೋರಿಸುತ್ತೇನೆ. ಒಂದು ವೇಳೆ ಅಷ್ಟು ಪಡೆದುಕೊಂಡಿಲ್ಲ ಎಂದರೆ ಗೆದ್ದರು ರಾಜೀನಾಮೆ ಕೊಡುತ್ತೇನೆ. ನಾನು ಗೆಲ್ಲುವುದರ ಜೊತೆ ನನ್ನ ಜತೆಯಲ್ಲಿ ನಾಲ್ವರು ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹೇ ಹುಚ್ಚ, ನೀನೇ ಗೆಲುವುದಿಲ್ಲ. ನಿಮ್ಮ ಮನೆಯಲ್ಲಿ ಜಗಳ ನಡೆದಿದೆ. ರೇವಣ್ಣ ಪತ್ನಿಗೆ ಟಿಕೆಟ್ ಕೊಡುವುದಕ್ಕೆ ಮನಸ್ಸು ಇಲ್ಲ ನಿನಗೆ ಎಂದು ಕಿಡಿಕಾರಿದರು.