ಕೊಪ್ಪಳ : ವಿರೋಧ ಪಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಟೆಂಡರ್ ಇನ್ನು ಕರೆದಿಲ್ಲ. ಕರೆದ ನಂತರ ವಿರೋಧ ಪಕ್ಷ ಸ್ಥಾನ ತುಂಬುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿದ ಸಚಿವ ತಂಗಡಗಿ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಸೀಟಿನಿಂದ ಹಿಡಿದು ಎಲ್ಲವೂ ಮಾರಾಟಕ್ಕಿವೆ ಅದನ್ನು ಬಿಜೆಪಿ ನಾಯಕ ಯತ್ನಾಳ್ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನ 2500 ಕೋಟಿಗೆ, ಮಂತ್ರಿ ಸ್ಥಾನ 70 ರಿಂದ 80 ಕೋಟಿಗೆ, ಶಾಸಕ ಸ್ಥಾನ 5 ರಿಂದ 7 ಕೋಟಿಗೆ ಮಾರಾಟವಾಗುತ್ತಂತೆ. ವಿರೋಧ ಪಕ್ಷ ಸ್ಥಾನ ಇದೀಗ ಖಾಲಿ ಇದೆ, ಅದು ಇನ್ನು ಟೆಂಡರ್ ಆಗಿಲ್ಲ, ಅದು ಟೆಂಡರ್ ಆದ ನಂತರ ಅದಕ್ಕೆ ದುಡ್ಡು ನಿಗಧಿಯಾಗುತ್ತೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ‘ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಬಿಜೆಪಿ ಬಲಪಡಿಸುತ್ತೇವೆ’
ಟೆಂಡರ್ ನಲ್ಲಿ ಯಾರು ಜಾಸ್ತಿ ಹಣ ಕೊಡುತ್ತಾರೋ, ಅವರು ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದ ತಂಗಡಗಿ, ವಿರೋಧ ಪಕ್ಷದ ಆಯ್ಕೆಗೆ ಟೆಂಡರ್ ಕರೆದಿದ್ದಾರೆ ಆದರೆ ಇನ್ನು ಯಾರು ಭಾಗಿಯಾಗಿಲ್ಲ. ಬಿಜೆಪಿಯಲ್ಲಿ ಎಲ್ಲಾ ಸೀಟು ಮಾರಾಟವಾಗುತ್ತಿವೆ, ಇದು ಸಹೋದರಿ ಚೈತ್ರಾ ಕುಂದಾಪುರನಿಂದ ಬೆಳಕಿಗೆ ಬಂದಿದೆ. ಎಂಪಿ ಟಿಕೆಟ್ ಕೂಡ ಮಾರಾಟವಾಗಬಹುದು ಎಂದರು.
ಇದನ್ನೂ ಓದಿ : ಪ್ರಧಾನಿಯಿಂದ ಇಂದು ‘ಯಶೋಭೂಮಿ’ ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ : ಏನಿದರ ವಿಶೇಷತೆ?
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ನಮಗೆ ಇನ್ನು ಹೆಚ್ಚು ಲಾಭ ಆಗುತ್ತೆ. ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಹೆಸರು ಇಟ್ಟುಕೊಂಡು ಕೋಮುವಾದಿಗಳ ಜೊತೆ ಸೇರ್ತಿದ್ದಾರೆ ಎಂದು ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಸಭೆಯಲ್ಲಿ ಆದೇಶ ಬಂದರೆ ಕಾವೇರಿ ನೀರು ತಮಿಳುನಾಡಿಗೆ ಬಿಡಲೇ ಬೇಕು – ಚೆಲುವರಾಯಸ್ವಾಮಿ
ರಾಜ್ಯದಲ್ಲಿ ಬರಗಾಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಬರದ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ, 162 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಿ, ಬರದ ಬಗ್ಗೆ ವರದಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಕೇಂದ್ರದ ಗೈಡ್ ಲೈನ್ಸ್ ಸಡಲಿಕರಣ ಮಾಡಲು, ಕೇಂದ್ರಕ್ಕೆ ನಮ್ಮ ಸಿಎಂ ಪತ್ರ ಬರೆದಿದ್ದಾರೆ. ಬರದ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡದೇ ಸಡಲಿಕರಣ ಮಾಡಲು ವಿನಂತಿಸುತ್ತೇನೆ. ಇದಕ್ಕೆ ನಮ್ಮ 25 ಸಂಸದರು ಕೂಡ ಒತ್ತಾಯ ಮಾಡಲಿ, ಪ್ರಧಾನಿ ಅವರ ಕಣ್ಣು ತೆರೆಸುವಂತ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.