ಬೆಂಗಳೂರು : ರಾಷ್ಟ್ರಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ತಯಾರಿ ಕುರಿತು ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಗೆದ್ದ ರಾಜ್ಯಗಳ ಮಾದರಿಯಲ್ಲಿ ಕೆಲಸಕ್ಕೆ ಸೂಚಿಸಿದ್ದಾರೆ, ದೇಶದ ಬೇರೆ ಬೇರೆ ಕಡೆ ಪಕ್ಷ ಹೇಗೆ ಚುನಾವಣಾ ಎದುರಿಸಿತ್ತು. ಅಲ್ಲೆಲ್ಲ ಪ್ರಚಾರ ಕಾರ್ಯ ಹೇಗಿದ್ದವು. ಹೀಗೆ ಸಾಕಷ್ಟು ವಿಚಾರಗಳನ್ನು ನಮಗೆ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ತಿಳಿಸಿದರು. ಒಟ್ಟು ಚುನಾವಣೆ ನಿರ್ವಹಣೆಗೆ 32 ಸಮಿತಿಗಳನ್ನು ರಚಿಸಿದ್ದು, ಮುಖ್ಯವಾಗಿ ಚುನಾವಣಾ ಆಯೋಗದ ಜತೆಗೆ ಕಾನೂನು ಪ್ರಕಾರ ಕೆಲಸ ಮಾಡುವುದನ್ನು ಹೇಳಿದ್ದಾರೆ.
ಒಂದೊಂದು ಸಮಿತಿ ಮಾಡಬೇಕಾದ ಜವಾಬ್ದಾರಿ, ಕರ್ತವ್ಯವನ್ನು ತಿಳಿಸಿದ್ದಾರೆ, ಬೂತ್ ಬಲಪಡಿಸುವುದು, ಪ್ರಚಾರ ಕಾರ್ಯ ಹೆಚ್ಚಳ, ಕರಪತ್ರ ಹಂಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಮನೆ ಮನೆಗೆ ತಿಳಿಸುವುದು, ಒಂದೆರಡು ಬಾರಿ ಜನರನ್ನು ಖುದ್ದಾಗಿ ಭೇಟಿ ಮಾಡಲು ಸಲಹೆ ಕೊಟ್ಟಿದ್ದಾರೆ.
ಅವರ ಸಲಹೆಯಂತೆ ನಡೆದು ಜನರನ್ನು ತಲುಪುತ್ತೇವೆ. ಅಲ್ಲದೆ ಕಾನೂನಿನಂತೆ ನಡೆದುಕೊಳ್ಳುವುದಾಗಿ ಭರವಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ವಿಜಯ ಸಂಕಲ್ಪ ಯಾತ್ರೆ ಮುಖಾಂತರ ಡಬಲ್ ಎಂಜಿನ ಸರ್ಕಾರದ ಸಾಧನೆ ಜನರ ಮುಂದಿಡುವ ಕಾರ್ಯವನ್ನು ಪಕ್ಷದ ನಾಯಕರು ಮಾಡುತ್ತಿದ್ದಾರೆ ಎಂದರು.