ಬೆಂಗಳೂರು: ಸಾಮಾನ್ಯವಾಗಿ ಸರ್ಕಾರ ಮದ್ಯದ ಮೇಲಿನ ದರವನ್ನು ಏರಿಕೆ ಮಾಡಿ ಶಾಕ್ ನೀಡುತ್ತದೆ. ಆದರೆ, ಈ ಬಾರಿ ಬೆಲೆ ಏರಿಕೆ ಮಾಡಿದ್ದ ಸರ್ಕಾರಕ್ಕೆ ಎಣ್ಣೆ ಪ್ರಿಯರು ಶಾಕ್ ನೀಡಿದ್ದು, ಮದ್ಯ ಖರೀದಿಗೆ ನಿರಾಸಕ್ತಿ ತೋರಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಲವು ರೀತಿಯಲ್ಲಿ ಬಂಡವಾಳ ಕ್ರೋಢೀಕರಿಸುತ್ತಿರುವ ರಾಜ್ಯ ಸರ್ಕಾರ, ಮದ್ಯದ ಬೆಲೆಯನ್ನೂ ಏರಿಕೆ ಮಾಡಿತ್ತು. ಮದ್ಯದ ಬೆಲೆ ಏರಿಸಿ ಬಿಸಿ ಮುಟ್ಟಿಸಿದ್ದ ಸರ್ಕಾರಕ್ಕೆ ಮದ್ಯಪ್ರಿಯರೇ ಶಾಕ್ ನೀಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ರಾಜ್ಯದ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದ್ದು, ಮದ್ಯ ಮಾರಾಟ ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಆದರೆ, ಬಿಯರ್ ಮಾರಾಟದಲ್ಲಿ ವ್ಯತ್ಯಯ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ರಾಜ್ಯ ಪಾನೀಯ ನಿಗಮಕ್ಕೆ ಬಾರ್ ಮಾಲೀಕರು ಸಲ್ಲಿಸುವ ಖರೀದಿ ಬೇಡಿಕೆ ಪ್ರಮಾಣ ಇಳಿಕೆಯಾಗಿದ್ದು, ಆಗಸ್ಟ್‌ನಲ್ಲಿ ₹962 ಕೋಟಿ ಮಾತ್ರ ಹಣ ಸಂಗ್ರಹವಾಗಿದೆ. ಹಿಂದಿನ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ; ಇಂದು ಬಿಜೆಪಿ ಕೋರ್ ಕಮಿಟಿ ಸಭೆ!
ಮದ್ಯ ಮಾರಾಟ ಇಳಿಕೆ ಪ್ರಮಾಣ ಗಮನಿಸುವುದಾದರೆ, 2022-ಆಗಸ್ಟ್‌ನಲ್ಲಿ ಸ್ವದೇಶಿ ಬ್ರ್ಯಾಂಡ್ – 25.50 ಲಕ್ಷ ಬಾಕ್ಸ್, ವಿದೇಶಿ– 10.34 ಲಕ್ಷ ಬಾಕ್ಸ್ ಮಾರಾಟ ಆಗಿದೆ. 2023 ಆಗಸ್ಟ್: ದೇಶಿ ಬ್ರ್ಯಾಂಡ್ – 21.87 ಲಕ್ಷ ಬಾಕ್ಸ್, ಬಿಯರ್ – 12.52 ಲಕ್ಷ ಬಾಕ್ಸ್ ಮಾರಾಟವಾಗಿದೆ. ಬೆಲೆ ಏರಿಕೆಯಿಂದ ಕಡಿಮೆ ದರದ ಮದ್ಯದ ಬ್ರ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ್ಯಾಂಡ್ ಕಡೆಗೆ ವಾಲಿದ್ದಾರೆ. ಆದ್ದರಿಂದ, ರಾಜ್ಯ ಸರ್ಕಾರದ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯವಾಗಿದ್ದು, ಈ ಆಗಸ್ಟ್ ನಲ್ಲಿ ₹962 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.