ಬೆಳಗಾವಿ: ಕೋವಿಡ್ ಹಿನ್ನೆಲೆ ನಾನು, ಸುಧಾಕರ್ ಸಭೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಕೋವಿಡ್ ನಿಂದ ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು ಎಂದರು.
ಮಾಸ್ಕ್ ಸ್ಯಾನಿಟೈಸರ್ , ಸಾಮಾಜಿಕ ಅಂತರ ಮುಖಾಂತರ ಕೋವಿಡ್ ತಡೆಯಬಹುದು. ಅದಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಗುತ್ತಿದೆ. ಹೊಸವರ್ಷ ಬರುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಮಾರ್ಗಸೂಚಿ ಮಾಡಲಾಗುತ್ತಿದೆ ಎಂದರು.ಕೋವಿಡ್ ನಿಯಂತ್ರಣ ಕುರಿತು ಸಭೆ ಇಂದು ಕರೆಯಲಾಗಿದ್ದು ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದೆ.
ಆಕ್ಸಿಜನ್ ಘಟಕ, ಔಷಧ ದಾಸ್ತಾನು ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ವ್ಯಾಪಾರ, ಶಿಕ್ಷಣ, ಕೈಗಾರಿಕೆಗೆ ತೊಂದರೆ ಆಗಲ್ಲ ಸಿಎಂ ಜೊತೆಗೆ ಚರ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಮಾಡಬಾರದು. ಅತಿ ಹೆಚ್ಚು ಓವರ್ ಆಕ್ಟಿಂಗ್ ಮಾಡದೆ ಸಾರ್ವಜನಿಕರೊಂದಿಗೆ ಫ್ರೆಂಡ್ಲಿ ಆಗಿ ನಿಲುವು ಕೈಗೊಳ್ಳಬೇಕು, ಎಂದು ಹೇಳಿದರು. ಇದಕ್ಕೆ ಯಾರು ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಅಶೋಕ್, ನಾನೇ ಓವರ್ ಆಕ್ಟಿಂಗ್ ಮಾಡುತ್ತಿದ್ದೇನೆ ಎಂದು ಜಾರಿಕೊಂಡರು.