ರಾಜಕಾರಣದ ರುಚಿ ಎಂದರೆ ಹಾಗೆಯೇ. ಒಮ್ಮೆ ಅದರ ರುಚಿ ಹತ್ತಿದರೆ ಸಾಕು ಕುಟುಂಬಸ್ಥರಿಗೆಲ್ಲ ಅಧಿಕಾರ ಸಿಕ್ಕರೂ ಸಮಾಧನಾ ಆಗುವುದಿಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ನಮ್ಮ ಮುಂದೆ ಇವೆ. ರಾಜ್ಯ ರಾಷ್ಟ ಮಟ್ಟದಲ್ಲಷ್ಟೇ ಅಲ್ಲ ನಗರಸಭೆಯಲ್ಲೂ ಕುಟುಂಬ ರಾಜಕಾರಣವನ್ನ ನೋಡಬಹುದಾಗಿದೆ. ತುಮಕೂರಿನ ಶಿರಾ ನಗರ ಸಭೆಗೆ ಒಂದೇ ಮನೆಯ ಮೂವರು ಆಯ್ಕೆಯಾಗಿದ್ದಾರೆ. ಇನ್ನೂ ವಿಶೇಷ ಅಂದ್ರೆ ಆ ಮೂವರೂ ವಾರಗಿತ್ತಿಯರಾಗಿದ್ದಾರೆ. ಶಿರಾ ಪುರಸಭೆಯ ಮಾಜಿ ಅಧ್ಯಕ್ಷ ಖಾನ್ ಸಾಬ್ ಅವರ ಸೊಸೆಯಂದಿರಾದ ರೆಹಾನ್ ಖಾನ್, ರುಖೈಯಾ ಪರ್ವಿನ್, ಸಮರಿನ್ ಖಾನ್.
ವಾರ್ಡ್ ನಂಬರ್ 20ನಲ್ಲಿ ರೆಹಾನ್ ಖಾನ್, ವಾರ್ಡ್ ನಂಬರ್ 19ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರುಖೈಯಾ ಪರ್ವಿನ್, ವಾರ್ಡ್ ನಂಬರ್ 24ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಮರಿನ್ ಖಾನ್ ಚುನಾವಣೆಯಲ್ಲಿ ಗೆದ್ದು, ನಗರಸಭೆಗೆ ಆಯ್ಕೆಯಾಗಿದ್ದಾರೆ. ಹೀಗೆ ಒಂದೇ ಕುಟುಂಬದ ಮೂವರು ಒಂದೇ ಬಾರಿಗೆ ನಗರಸಭೆ ಪ್ರವೇಶಿಸಿದ್ದಾರೆ. ಇನ್ನು ಆಯ್ಕೆಯಾದವರ ಮಾವ ಕೂಡ ಮಾಜಿ ನಗರಸಭೆ ಸದಸ್ಯರಾಗಿದ್ದರು. ಇನ್ನೊಂದು ಪ್ರಕರಣದಲ್ಲಿ 15 ದಿನದ ಬಾಣಂತಿ ಗೆಲುವು ಸಾಧಿಸಿದ್ದಾರೆ. 15 ದಿನದ ಮಗುವನ್ನು ಆರೈಕೆ ಮಾಡುತ್ತ, ಮನೆ ಮನೆಗೆ ತಿರುಗಿ ಪ್ರಚಾರ ಮಾಡಿ ಗೆಲುವು ಸಾಧಿಸಿದ್ದಾರೆ. ಶಿರಾ ನಗರಸಭೆಯ 30ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ಸ್ವಾತಿ ಕಣಕ್ಕೆ ಇಳಿದಿದ್ದರು. ಸದ್ಯ 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.