ಬೆಂಗಳೂರು: ಬಿಜೆಪಿ ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವದ ವಿರೋಧಿಯಾಗಿದ್ದೇನೆ. ಬಿಜೆಪಿಯವರು ಪ್ರಬಲ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ. ಬಿಜೆಪಿ ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ವಿಚಾರವಾಗಿ ಮಾತನಾಡಿ, ನಾನು ಹಿಂದೂನೇ ಅಲ್ವಾ, ಹಿಂದೂ ವಿರೋಧಿ ಹೇಗೆ ಆಗುತ್ತೇನೆ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮ ಬೇರೆ, ಹಿಂದುತ್ವ ಬೇರೆ. ಹಿಂದುತ್ವ ಮಾತನಾಡುತ್ತಾರಲ್ಲ ಅದಕ್ಕೆ ಮತ್ತು ಬೇರೆ ಧರ್ಮದವರನ್ನು ದ್ವೇಷ ಮಾಡುವುದನ್ನು ನಾನು ವಿರೋಧ ಇದೆ. ಅದುಬಿಟ್ಟರೆ ನಾನು ಹಿಂದೂ ಧರ್ಮದ ಪರವಾಗಿ ಇದ್ದೇನೆ, ಎಲ್ಲ ಧರ್ಮದ ಪರ ಇದ್ದೇನೆ. ಬಿಜೆಪಿ ನನ್ನನ್ನು ಹಣಿಯಲು ಸಾಧ್ಯವಿಲ್ಲ. ಅವಹೇಳನ ಹಾಗೂ ತೇಜೋವಧೆ ಮಾಡುವ ಪ್ರಯತ್ನ ಅಷ್ಟೇ ಎಂದಿದ್ದಾರೆ.