ಮಂಡ್ಯ: ನನ್ನ ಕ್ಷೇತ್ರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಮಂಡ್ಯದ ಮುಸ್ಲಿಂ ಬಡಾವಣೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರಿಗೋಸ್ಕರ ಅಲ್ಲದಿದ್ದರೂ ರಾಜ್ಯದ ಜನರಿಗಾಗಿ ನನ್ನ ಕ್ಷೇತ್ರ ತ್ಯಾಗ ಮಾಡುತ್ತೇನೆ ಎಂದರು.
ಚುನಾವಣೆಗೆ ನಿಲ್ಲಿಸಿ, ಅವರನ್ನು ಗೆಲ್ಲಿಸುತ್ತೇನೆ. ಅವರಿಗಾಗಿ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ತಾವು ಸಿದ್ಧ, ಈಗಾಗಲೇ ನಾನು ಅವರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಅವರು ಒಪ್ಪಿಲ್ಲ, ಒಪ್ಪುತ್ತಾರೆ ಎನ್ನುವ ಭರವಸೆಯಿದೆ ಎಂದು ಹೇಳಿದರು.ನನಗಿಂತ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೋಸ್ಕರ ಅಲ್ಲದಿದ್ದರೂ ರಾಜ್ಯದ ಜನರಿಗಾಗಿ ನನ್ನ ಕ್ಷೇತ್ರವನ್ನು ತ್ಯಾಗ ಮಾಡುತ್ತೇನೆ.
ಸಿದ್ದರಾಮಯ್ಯ ಅವರು ರಾಜಕೀಯದಲ್ಲಿರಬೇಕು ಹಾಗಾಗಿ ಕ್ಷೇತ್ರ ಬಿಟ್ಟುಕೊಡುತ್ತೇನೆ. ನಾನು ನಾಲ್ಕನೇ ಬಾರಿ ಶಾಸನಾಗಿರುವುದು. ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ. ನನ್ನನ್ನು ಇಲ್ಲಿಂದ ತೆಗೆದುಹಾಕಲು ಬಹಳಷ್ಟು ಪ್ರಯತ್ನ ನಡೆದಿದೆ. ಆದರೆ ಅದು ಫಲ ನೀಡಿಲ್ಲ ಎಂದು ಎದುರಾಳಿಗಳಿಗೆ ಟಾಂಗ್ ಕೊಟ್ಟರು.ಈ ಬಾರಿ ಖಂಡಿತ ಕಾಂಗ್ರೆಸ್ ಅನ್ನು ಜನರು ಗೆಲ್ಲಿಸುತ್ತಾರೆ ಎಂದು ಹೇಳಿದರು.