Wednesday, March 22, 2023
spot_img
- Advertisement -spot_img

ಬಿಜೆಪಿ ವಿರುದ್ಧ ತೊಡೆ ತಟ್ಟಿದ ಸಿದ್ದು-ಡಿಕೆಶಿ, ರೇಸ್‌ ಕೋರ್ಸ್‌ ರಸ್ತೆಯಲ್ಲಿ ಪೇ ಸಿಎಂ ಪೋಸ್ಟರ್‌ ಅಂಟಿಸಿ ಆಕ್ರೋಶ..!

ಬೆಂಗಳೂರು: 40 ಪರ್ಸೆಂಟ್‌ ಕಮಿಷನ್‌ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಹಾ ಸಮರವೇ ನಡೆಯುತ್ತಿದೆ. ನಾಳೆ ನಾವೇ ಪೋಸ್ಟರ್‌ ಅಂಟಿಸುತ್ತೇವೆ ತಾಕತ್ತಿದ್ದರೆ ನಮ್ಮನ್ನ ಬಂಧಿಸಿ ಎಂದು ಸವಾಲು ಹಾಕಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಂದು ಖುದ್ದು ತಾವೇ ತೆರಳಿ ಪೋಸ್ಟರ್‌ ಅಂಟಿಸಿದ್ದಾರೆ. ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಇನ್ನಿತರ ಕಾಂಗ್ರೆಸ್‌ ಮುಖಂಡರು ಇಂದು ಖುದ್ದು ತಾವೇ ರೇಸ್‌ ಕೋರ್ಸ್‌ ರಸ್ತೆಗೆ ತೆರಳಿ ಪೇ ಸಿಎಂ ಪೋಸ್ಟರ್‌ ಅಂಟಿಸಿದ್ದಾರೆ. ಬಿಎಂಟಿಸಿ ಬಸ್, ರೇಸ್ ಕೋರ್ಸ್ ಕೌಂಪೌಂಡ್‌ಗೆ ಅಂಟಿಸಿ ಬಿಜೆಪಿ ವಿರುದ್ಧ ಕೈ ಪಡೆ ಆಕ್ರೋಶಿಸಿದೆ. ಸಿಕ್ಕ ಸಿಕ್ಕ ಕಡೆ ಕೈ ಟೀಂ ಪೋಸ್ಟರ್ ಅಂಟಿಸಿದ್ದು, ಪೊಲೀಸರು ಪೋಸ್ಟರ್‌ ಅನ್ನು ಕಿತ್ತುಹಾಕುತ್ತಿದ್ದಾರೆ.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕೂಡಾ ಪೋಸ್ಟರ್ ಅಂಟಿಸಿದ್ದು ಇವರಿಗೆ ಸುರ್ಜೇವಾಲಾ ಸಾಥ್ ಕೊಟ್ಟಿದ್ದಾರೆ. ಒಟ್ಟಾರೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಪೋಸ್ಟರ್ ಕದನ ಮುಂದುವರೆದಿದ್ದು. ಪೋಸ್ಟರ್‌ ಅಂಟಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಒಂದು ನ್ಯಾಯ? ನಮಗೊಂದು ನ್ಯಾಯನಾ? ಪೊಲೀಸರು, ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿದ್ದಾರೆ, ಮುಂದಿನ ಎಲೆಕ್ಷನ್‌ನಲ್ಲಿ ಗೆದ್ದು ಬರಲಿ ಎಂದು ಕಿಡಿಕಾರಿದ್ರು. ನಿನ್ನೆಯಷ್ಟೇ ಪೋಸ್ಟರ್‌ ಅಂಟಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನ ಪೋಲಿಸರು ಬಂಧಿಸಿ ವಿಚಾರಣೆ ನಡೆಸಿದ್ರು. ಇದ್ರಿಂದ ರೊಚ್ಚೆಗೆದ್ದ ಕೈ ನಾಯಕರು ನಾವೇ ಖುದ್ದು ಪೋಸ್ಟರ್‌ ಅಂಟಿಸುತ್ತೇವೆ ತಾಕತ್ತಿದ್ದರೆ ನಮ್ಮನ್ನ ಬಂಧಿಸಿ ಎಂದು ಸವಾಲು ಹಾಕಿದ್ದರು. ಅದರಂತೆ ಇಂದು ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಂಬಿ ಪಾಟೀಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಹಾಗೂ ಕಾರ್ಯಕರ್ತರು ಸೇರಿ ಪೋಸ್ಟರ್‌ ಅಂಟಿಸಿದ್ದಾರೆ. ಬಳಿಕ ಪೊಲೀಸರು ಪೋಸ್ಟರ್‌ ಕಿತ್ತುಹಾಕಿ ಕೈ ನಾಯಕರನ್ನ ವಶಕ್ಕೆ ಪಡೆದಿದ್ದಾರೆ.

Related Articles

- Advertisement -

Latest Articles