Monday, December 11, 2023
spot_img
- Advertisement -spot_img

ಸಿದ್ದರಾಮಯ್ಯ ಸರ್ಕಾರ ಮಕ್ಕಳಿಗೆ ಅನ್ಯಾಯ ಮಾಡಲು ಮುಂದಾಗಿದೆ: ಶಶೀಲ್ ನಮೋಶಿ

ಕಲಬುರಗಿ : ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯ ಸರ್ಕಾರ ರದ್ದುಗೊಳಿಸಲು ಮುಂದಾಗಿದೆ ಎಂದು ಬಿಜೆಪಿ ಎಮ್ಎಲ್‌ಸಿ ಶಶೀಲ್ ನಮೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣದ ಮಹತ್ವ ಗಮನದಲ್ಲಿಟ್ಟು ಮೋದಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದೆ, ಸಿಬಿಎಸ್‌ಸಿ ಖಾಸಗಿ ಶಾಲೆಗಳು ಈಗಾಗಲೇ ಎನ್‌ಇಪಿ ಅಳವಡಿಸಿಕೊಂಡಿವೆ, ಎನ್‌ಇಪಿಯಿಂದ ಶಾಲೆಗಳ ಪ್ರವೇಶಾತಿ ಹೆಚ್ಚಳ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : MLAs salaries : ಶಾಸಕರಿಗೆ ಅತೀ ಹೆಚ್ಚು ಸಂಬಳ ನೀಡುವ ರಾಜ್ಯ ಜಾರ್ಖಂಡ್ : ಕರ್ನಾಟದಲ್ಲಿ ಎಷ್ಟಿದೆ ಗೊತ್ತಾ?

ಬುನಾದಿ ಹಂತದಿಂದಲೇ ಎನ್‌ಪಿಎಸ್‌ ಅಳವಡಿಸಿದ ಹಿನ್ನೆಲೆ ಮೂರು ವರ್ಷ ದಾಟುತ್ತಿದ್ದಂತೆ ಖಾಸಗಿ ಕೇಂದ್ರಗಳಿಗೆ ತೆರಳುವ ಮಕ್ಕಳಂತೆ ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲಿದೆ, ಎನ್ ಇಪಿ ರದ್ದುಪಡಿಸಿದರೆ ಶಿಕ್ಷಣದಲ್ಲಿ ತಾರತಮ್ಯ, ಬಡ ಹಾಗೂ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡ್ತಿದೆ.

ಸಿದ್ದರಾಮಯ್ಯ ಸರ್ಕಾರ ಮಕ್ಕಳಿಗೆ ಅನ್ಯಾಯ ಮಾಡಲು ಮುಂದಾಗಿದೆ, ಎನ್‌ಇ ಪಿ ಅನುಷ್ಠಾನ ವಿಚಾರದಲ್ಲಿ ರಾಜಕಾರಣ ಮಾಡುವ ಬದಲು ಲೋಪ ದೋಷಗಳ ಬಗ್ಗೆ ಬಹಿರಂಗ ದಾಖಲೆ ನೀಡಲಿ, ಯಾವುದೇ ಚರ್ಚೆಗಳು ಜನರ ಅಭಿಪ್ರಾಯ ಇಲ್ಲದೆ ರದ್ದುಗೊಳಿಸಲು ಮುಂದಾಗಿರೋದು ಕೆಟ್ಟ ನಿರ್ಧಾರವಾಗಿದ್ದು, ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಇನ್ನೂ ಸಿಎಂ ಸಿದ್ದರಾಮಯ್ಯ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ರದ್ದುಗೊಳಿಸಲಾಗುವುದು ಎಂದು ಹೇಳಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles