Sunday, March 26, 2023
spot_img
- Advertisement -spot_img

ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ : ಶಾಸಕ ಜಿ.ಟಿ ದೇವೇಗೌಡ

ಮೈಸೂರು: ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಮುತ್ಸದ್ದಿಗಳ ಬಾಯಲ್ಲಿ ಈ ರೀತಿಮಾತು ಸರಿಯಲ್ಲ ಎಂದು ಸಿದ್ದರಾಮಯ್ಯ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

ನಾಯಿಗೆ ನಾರಾಯಣಸ್ವಾಮಿ ಅಂತಾ ಕರೆಯುತ್ತಾರೆ. ನಮ್ಮ ಆದಿಚುಂಚನಗಿರಿ ಸ್ವಾಮೀಜಿ ಎರಡು ನಾಯಿ ಸಾಕಿದ್ದಾರೆ. ಆ ನಾಯಿಗಳು ದೊಡ್ಡವರು ಬಂದಾಗ ನಮಸ್ಕಾರ ಮಾಡುತ್ತವೆ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿ ಮರಿಗೆ ಹೋಲಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದಾರೆ.ಅವರವರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ನಾಯಿಗೆ ನಾವು ಮನುಷ್ಯರು ಸಮವಲ್ಲ. ಮಾತನಾಡುವವರು ಅವರ ಇತಿ ಮಿತಿ ಅರ್ಥ ಮಾಡಿಕೊಳ್ಳಲ್ಲ ಅದೇ ಸಮಸ್ಯೆ ಎಂದು ವಾಗ್ದಾಳಿ ನಡೆಸಿದರು.


‘ಅಮೂಲ್‌ ಹಾಗೂ ನಂದಿನಿ–ಕೆಎಂಎಫ್‌ ವಿಲೀನದ ಕುರಿತು ಈಗಾಗಲೇ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿಲೀನವಾಗಲು ಬಿಡುವುದಿಲ್ಲ’ ಎಂದು ಹೇಳಿದರು.


‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ ಅನ್ನು ಜನರು ಬೆಂಬಲಿಸಲಿದ್ದಾರೆ. ಹೀಗಾಗಿಯೇ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರಂಭಿಸಿರುವ ಪಂಚರತ್ನ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದಾರೆ. ಪಕ್ಷ 45ರಿಂದ 50 ಕ್ಷೇತ್ರ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

- Advertisement -

Latest Articles