ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರದ ಕೈಗೊಂಬೆ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣಕ್ಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡ್ತಾ ಇಲ್ಲ, ನಮಗೆ ಅನುಮತಿ ಕೊಡೋವರೆಗೂ ನಾವು ಹೋಗೋದಿಲ್ಲ , ಸುಪ್ರೀಂ ಕೋರ್ಟ್ ಅನುಮತಿ ಕೊಟ್ರೂ, ಪಾಲಿಕೆ ಆಯುಕ್ತರು ಪರವಾನಿಗೆ ಕೊಡ್ತಿಲ್ಲ, ಪಾಲಿಕೆ ಬಿಟ್ಟು ಹೋಗೋದಿಲ್ಲ, ಅವರು ಪರವಾನಿಗೆ ಕೊಡಲಿ ಬಿಡಲಿ ಅಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೋದು ಫಿಕ್ಸ್ ಎಂದು ಸವಾಲು ಹಾಕಿದ್ದಾರೆ.
ಹುಬ್ಬಳ್ಳಿ ಜನತೆ ಶಾಂತವಾಗಿ ಗಣೇಶ ಹಬ್ಬ ಆಚರಣೆ ಮಾಡ್ತೀವಿ, ಕಳೆದ ವರ್ಷದಂತೆ ಚೆನ್ನಮ್ಮ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ವಿ, ಸಾಮಾನ್ಯ ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿತ್ತು,ಸಾಮಾನ್ಯ ಸಭೆಯಲ್ಲಿ ತಗೆದುಕೊಂಡು ನಿರ್ಣಯಕ್ಕೆ ಆಯುಕ್ತರು ವರ್ಕಿಂಗ್ ಆರ್ಡರ್ ಮಾಡ್ತಿಲ್ಲ. ಮುಸ್ಲಿಂ ಸಮಾಜಕ್ಕೆ ನಮಾಜ್ ಮಾಡೋಕೆ ಸಿದ್ದರಾಮಯ್ಯ ಸರ್ಕಾರ ಅವಕಾಶ ಕೊಟ್ಟಿದೆ, ಆದ್ರೆ ಗಣೇಶ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಡ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ಕಾವೇರಿ ನೀರು ವಿಚಾರ : ಮಂಡ್ಯ ರೈತ ಹಿತರಕ್ಷಣಾ ಸಮಿತಿಯಿಂದ ಹೆದ್ದಾರಿ ತಡೆದು ಪ್ರತಿಭಟನೆ
ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರ ನಿರ್ದೇಶನದಂತೆ ಕೆಲಸ ಮಾಡ್ತಿದ್ದಾರೆ, ಅನುಮತಿ ಸಿಗೋವರೆಗೂ ಪಾಲಿಕೆ ಬಿಟ್ಟು ಹೋಗಲ್ಲ, ಕಾನೂನು ಪ್ರಕಾರ ಯಾರದರೂ ತೊಂದರೆ ಮಾಡ್ರಾರೆ ಅಂದ್ರೆ ಅವರನ್ನು ಒಳಗೆ ಹಾಕಿ, ಹಿಂದೂ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ, ನಿಮಗೆ ಹಿಂದೂಗಳು ವೋಟ್ ಹಾಕಿದ್ದಾರೆ, ಹೀಗಾಗಿ ಕೂಡಲೇ ಅನುಮತಿ ಕೊಡಿ ಎಂದು ಮನವಿ ಮಾಡಿದರು.
ಇನ್ನೂ ಹುಬ್ಬಳ್ಳಿ -ಧಾರವಾಡ ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ವಿಳಂಬ ಮಾಡ್ತಿರೋದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಎದುರು ಭಜನೆ ಮಾಡಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಾದ್ಯಮೇಳದೊಂದಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಭಜನೆ ಮಾಡಿ ಗಣಪತಿ ಪ್ರತಿಷ್ಠಾಪನೆ ಅನುಮತಿಗೆ ಆಗ್ರಹಿಸಿದ್ದಾರೆ. ಇನ್ನು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳಿಗೆ ಹಾಗೂ ಪಾಲಿಕೆಗೆ ಬರುವ ಸಾರ್ವಜನಿಕರಿಗೆ ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.