ಉಡುಪಿ: ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ಬಗ್ಗೆ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆ. ಪೋಸ್ಟರ್ ಅಂಟಿಸಿದ ಡಿ.ಕೆ.ಶಿವಕುಮಾರ್ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು.
ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಇಡಿ ವಿಚಾರಣೆಗೆ ಒಳಗಾಗಿ ಪೇಸಿಎಂ ಪೋಸ್ಟರ್ ಅಳವಡಿಸುತ್ತಾರೆ. ಇದು ಹ್ಯಾಸ್ಯಾಸ್ಪದ. ಕಾಂಗ್ರೆಸಿಗೆ ಪೇಸಿಎಂ ಪೋಸ್ಟರ್ ಅಂಟಿಸಲು ನೈತಿಕತೆ ಇದಿಯಾ ಎಂದು ಟೀಕಿಸಿದರು. ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ನೇರವಾಗಿ ಮಾತನಾಡುವ, ಎದುರಿಸುವ ಅಥವಾ ದಾಖಲೆ ನೀಡುವ ಬದಲು ವಾಮ ಮಾರ್ಗ ಅನುಸರಿಸುತ್ತಿದೆ ಕಾಂಗ್ರೆಸ್‌ನವರದ್ದು ಡರ್ಟಿ ಪಲಿಟಿಕ್ಸ್, ನೈತಿಕತೆ ಇಲ್ಲದ ರಾಜಕೀಯ ಅವರದ್ದು. ರಾಜ್ಯದಲ್ಲಿ ಕೈ- ಕಮಲ ದ ನಡುವೆ ಪದೇ ಪದೇ ಸಂಘರ್ಷ ನಡೆಯುತ್ತಿದ್ದು, ಕಾಂಗ್ರೆಸ್- ಬಿಜೆಪಿ ಕಾಂಗ್ರೆಸ್ ಇಂದ ಪೇಸಿಎಂ ಅಭಿಯಾನ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಜೋರಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್‌ಗಳ ಸರಮಾಲೆಯನ್ನೇ ಬಿಡುಗಡೆ ಮಾಡುತ್ತಿದ್ದರೆ, ಬಿಜೆಪಿ ಕೌಂಟರ್ ನೀಡುತ್ತಿದೆ.