Monday, March 20, 2023
spot_img
- Advertisement -spot_img

ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ತೊಗೊಂಡಿದ್ರೆ ತೋರಿಸಿ, ಖಂಡಿತ ಸನ್ಯಾಸತ್ವ ಸ್ವೀಕರಿಸುತ್ತೇನೆ

ಕೋಲಾರ: ನಾನು ಈಗಾಗಲೇ ಹೇಳಿರುವಂತೆ ಕೋಲಾರದಿಂದ ಸ್ಪರ್ಧಿಸುತ್ತೇನೆ. ಪಕ್ಷದ ಹೈಕಮಾಂಡ್​ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ಸ್ವೀಕರಿಸಿದ್ದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.

ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ನೊಂದಿದ್ದಾರೆ. ಅನೇಕ ಕಷ್ಟಗಳನ್ನು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗಲ್ಲ. ಬಿಜೆಪಿಯಂತಹ ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣ್ತಾ ಇದೆ. ಅದಕ್ಕಾಗಿ ಬಿಜೆಪಿಯವರು ಹೆದರಿಕೊಂಡು ವಾರಕ್ಕೊಂದು ಸಲ ಮೋದಿಯವರನ್ನು ಕರೆಸ್ತಿದ್ದಾರೆ. ಮೋದಿ ಮತ್ತೆ ನಮಗೆ ಅಧಿಕಾರ ಕೊಡಸ್ತಾರೆ ಅನ್ನೋ ಭರವಸೆಯಲ್ಲಿದ್ದಾರೆ. ಅವರಿಗೆ ಬೇರೆ ಬಂಡವಾಳ ಇಲ್ಲ ಎಂದು ಕಿಡಿಕಾರಿದರು.

ನೂರು ಸಾರಿ ಮೋದಿ ಅಮಿತ್ ಶಾ ಬಂದು ಕ್ಯಾಂಪೇನ್ ಮಾಡಿದರೂ ಕೂಡ ಸೂರ್ಯ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ರೆಸ್ಪಾನ್ಸ್ ಕಾರ್ಯಕರ್ತರಿಂದ ಬರ್ತಿದೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ನೊಂದಿದ್ದಾರೆ ಎಂದು ಆಕ್ರೋಶಿಸಿದ್ದಾರೆ.

Related Articles

- Advertisement -

Latest Articles