ಕಲಬುರಗಿ: ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಅದಕ್ಕೆ ಮೋದಿ ಅವರನ್ನು ಕರೆತರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ವಿಚಾರ ಸಂಬಂಧ ಮಾತನಾಡಿ, ನಾವು ಮಾಡಿದ ಕೆಲಸಕ್ಕೆ ಚಾಲನೆ ನೀಡುತ್ತಾರೆ. ನಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಗಳಿಗೆ ಅವರು ಚಾಲನೆ ನೀಡುತ್ತಿದ್ದಾರೆ. ಈ ಹಿಂದೆಯೂ ಲಂಬಾಣಿ ಜನಾಂಗದವರಿಗೆ ಹಕ್ಕು ಪತ್ರ ನೀಡಿದ್ರು. ಕಂದಾಯ ಗ್ರಾಮ ಘೋಷಣೆ ಮಾಡಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಈಗ ಪ್ರಧಾನಿ ಮೋದಿ ಹಕ್ಕು ಪತ್ರ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು.
ಏನು ಕೆಲಸ ಮಾಡಿಲ್ಲವಲ್ಲ ರಾಜ್ಯ ಬಿಜೆಪಿ ಗೆ ಮೋದಿಯೆ ಬಂಡವಾಳ. ಯಾಕಂದ್ರೆ ಜನ ವಿರೋಧಿ ಸರ್ಕಾರ 40% ಸರ್ಕಾರ ಇದು. ಮೋದಿ ಬಂದ್ರೆ ವೋಟ್ ಬರುತ್ತವೆ ಅಂತಾ ಬಿಜೆಪಿ ಅಂದುಕೊಂಡಿದೆ. ಆದರೆ ಬಿಜೆಪಿಯನ್ನ ಸೋಲಿಸಬೇಕು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂತಾ ಜನ ಈಗಾಗ್ಲೆ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.