ಶಿವಮೊಗ್ಗ : ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ವ್ಯಕ್ತಿತ್ವ ಅನಾವರಣ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರ 3500 ಕಿ ಮೀ ಪಾದಯಾತ್ರೆ ಸುಲಭವಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷ ಹೆಚ್ಚಾಗಿದೆ ಎಂದು ಹೇಳಿದರು.
ಶಿವಮೊಗ್ಗ ದಲ್ಲಿ ಈಶ್ವರಪ್ಪ ಅವರೇ ಗಲಾಟೆ ಮಾಡಿಸಿದ್ದಾರೆ . ಈಶ್ವರಪ್ಪ ಸಚಿವರಾದ ಸಂದರ್ಭದಲ್ಲಿ ಹೆಣದ ಮೇಲೆ ರಾಜಕಾರಣ ಮಾಡಿದ್ದರು. 144 ಸೆಕ್ಷನ್ ನಡುವೆ ಹರ್ಷ ಶವಯಾತ್ರೆ ಈಶ್ವರಪ್ಪ ಮಾಡಿದ್ದರು. ಬಿಜೆಪಿ ಮೀಸಲಾತಿ ವಿರೋಧ ಆಗಿದೆ. ರಾಮುಲುಗೆ ಸಂವಿಧಾನ ಗೊತ್ತಿಲ್ಲ.. ಆತ ಒಬ್ಬ ಪೆದ್ದ. ಯಾರೋ ಬರೆದುಕೊಟ್ಟಿದ್ದು ಓದುತ್ತಾನೆ. ಬಿಜೆಪಿಯನ್ನು ತೊಲಗಿಸಲು ಈಗ ಬಿಜೆಪಿ ಸಂಕಲ್ಪ ಸಮಾವೇಶ ನಡೆಯುತ್ತಿದೆ ಎಂದು ಲೇವಡಿಯಾಡಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ಥಾರೆ .ಪರೇಶ್ ಮೇಸ್ತಾ ಸಹಜ ಸಾವು, ಆದರೆ ಹೆಣದ ಮೇಲೆ ರಾಜಕೀಯ ಮಾಡಿದರು. ಗಲಾಟೆ ಮಾಡಿದ್ದರು. ನಾನೂ ಪ್ರಕರಣ ತನಿಖೆ ಸಿಬಿಐ ಗೆ ಕೊಟ್ಟಿದೆ. ಅದು ಕೊಲೆ ಅಲ್ಲ ಎನ್ನುವ ವರದಿ ಬಂತು. 2008 ರಿಂದ ಬಿಜೆಪಿ ಸರ್ಕಾರವು ಸಿಬಿಐಗೆ ಯಾವುದೇ ಪ್ರಕರಣ ವಹಿಸಲಿಲ್ಲ. ಬಿಜೆಪಿ ಯೋಗ್ಯತೆಗೆ ಒಂದೇ ಒಂದು ಕೇಸ್‌ಅನ್ನು ಸಿಬಿಐಗೆ ವಹಿಸಲಿಲ್ಲ.
ವರ್ಗಾವಣೆಗೆ 70 ರಿಂದ 80 ಲಕ್ಷ ಕೊಟ್ಟು ಪೊಲೀಸ ಇಲಾಖೆ ಯಲ್ಲಿ ಕೊಟ್ಟು ಬರುತ್ತಾರೆ. ಅವರು ಹೇಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಬಿಜೆಪಿ ನಾಯಕರು ಡೋಂಗಿ ಗಳು. ಸುಳ್ಳೇ ಹೇಳುತ್ತಾರೆ. ನಳೀನ್ ಕುಮಾರ ಒಬ್ಬ ಜೋಕರ್. ಆತನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.