ವಿಜಯನಗರ: ಬಿಜೆಪಿ ಸರ್ಕಾರ ಕಿತ್ತೋಗೆದು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನ ಹಳ್ಳಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಪ್ರದೀಪ್ ತನ್ನ ಆತ್ಮಹತ್ಯೆಗೆ ಲಿಂಬಾವಳಿ ಕಾರಣ ಎಂದು ಬರೆದಿದ್ದಾರೆ. ಸಂತೋಷ್ ಕೂಡ ಈಶ್ವರಪ್ಪ ಕಾರಣ ಎಂದು ಬರೆದಿದ್ದರು. ಇವರಿಗೆ ಜೈಲು ಶಿಕ್ಷೆ ಆಗಬೇಕು, ಆದ್ರೆ ಶಿಕ್ಷೆ ಕೊಡಲಿಲ್ಲ. ಈಶ್ವರಪ್ಪನಿಗೆ ಕ್ಲಿನ್‌ಚಿಟ್ ಕೊಟ್ಟಿದ್ದಾರೆ, ಲಿಂಬಾವಳಿ ವಿಷಯದಲ್ಲಿ ಹೀಗೆ ಆಗಬಾರದು. ಕೂಡಲೇ ಲಿಂಬಾವಳಿಯನ್ನ ಬಂಧಿಸಿ, ಪ್ರದೀಪ್‌ಗೆ ನ್ಯಾಯ ಕೊಡಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ. ಅಕ್ಕಿ ಉಚಿತವಾಗಿ ಕೊಟ್ಟೆ. ಇದನ್ನ ಬಸವರಾಜ್ ಬೊಮ್ಮಾಯಿ ಹೇಳ್ತಾರೆ ಇದು ಕೇಂದ್ರ ಸರ್ಕಾರದ್ದು ಅಂತ. ನಿಮಗೆ ಮಾನ ಮರ್ಯದೆ ಏನಾದ್ರು ಇದೆಯಾ? ಎಂದು ವಾಗ್ದಾಳಿ ನಡೆಸಿದ್ರು. ನಾನು ಮುಖ್ಯಮಂತ್ರಿ ಆಗಿದ್ದಾಗ ಪಕ್ಷಾತೀತವಾಗಿ ಅನುದಾನ ನೀಡಿದ್ದೆ. ಬಿಜೆಪಿಯವರು ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ? ಸಿಎಂ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ.
ಬೊಮ್ಮಾಯಿ ಅವರೇ ಧಮ್, ತಾಕತ್ತಿದ್ರೆ ಕೇಂದ್ರದಿಂದ ಅನುದಾನ ತನ್ನಿ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುತ್ತೇವೆ ಎಂದು ಕಿಡಿಕಾರಿದರು.