ಬೆಂಗಳೂರು : ಕುಕ್ಕರ್ ಬ್ಲಾಸ್ಟ್ ರಾಜಕೀಯಕ್ಕೆ ಬಳಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ , ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯವರು ಹೇಳಿಕೆಗಳನ್ನು ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಭಯೋತ್ಪಾದನೆ ಹತ್ತಿಕ್ತಿದ್ಯಾ? ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಿ, ಬಿಜೆಪಿ ಇದ್ಯಲ್ಲ, ಬರೀ ಜನರನ್ನ ಪ್ರಚೋದನೆ ಮಾಡಿ, ಭಾವನಾತ್ಮಕ ವಿಚಾರ ಮಾತನಾಡೋದಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗೆ ಕಾನೂನು ಗೊತ್ತಿದ್ಯಾ ಗೊತ್ತಿಲ್ಲ. ಅವರು ಹೇಳಿದ್ರು ಎಂದು ಮಾಡುತ್ತಾರೆ. ಸಂವಿಧಾನ ಮತ್ತು ಐಪಿಸಿಯಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ಇದ್ಯಾ? ಪೊಲೀಸ್ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡೋದು ಖಂಡನೀಯ. ಸರ್ಕಾರ ಇದಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು.
ನೈತಿಕ ಪೊಲೀಸ್ ಗಿರಿ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಮುಖ್ಯಮಂತ್ರಿಯೇ ನೈತಿಕ ಪೊಲೀಸ್ ಗಿರಿ ಪ್ರೇರೇಪಿಸುವ ಕೆಲಸ ಮಾಡ್ತಿದಾರೆ.ಎರಡು ತಿಂಗಳಲ್ಲಿ ಸುಮಾರು ಏಳೆಂಟು ಕೇಸುಗಳು ಆಗಿವೆ. ಇದನ್ನು ಖಂಡಿಸುತ್ತೇನೆ ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದರು.