ಚಿತ್ರದುರ್ಗ : ಸಿದ್ದರಾಮಯ್ಯ ಒಬ್ಬ ಸ್ವಾಭಾವಿಕ ನಾಯಕ, ನ್ಯಾಚುರಲ್ ಲೀಡರ್ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಸ್ ಲೀಡರ್ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ, ಅವ್ರ ಸಾಮರ್ಥ್ಯ ಏನು ಅಂದ್ರೆ ಉತ್ತಮ ಆಡಳಿತ, ನುಡಿದಂತೆ ನಡೆಯೋದು , ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನ : ಕೈ ನಾಯಕರ ಸಭೆ ಕರೆದ ಸೋನಿಯಾ ಗಾಂಧಿ
ಸಿದ್ದರಾಮಯ್ಯ ನಾಯಕತ್ವದ ಮೇಲೆ ಇಡೀ ರಾಜ್ಯದ ಜನ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ, ಸಿದ್ದರಾಮಯ್ಯ ಟ್ರಸ್ಟೆಡ್ ಲೀಡರ್ , ಈಶ್ವರಪ್ಪ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಹೇಳ್ತಾ ಇರ್ತಾರೆ, ಅವ್ರ ನಾಲಿಗೆಗೆ, ಮೆದುಳಿಗೆ ಕನೆಕ್ಷನ್ ಇಲ್ಲ ಅಂತ, ಈಶ್ವರಪ್ಪ ಹತಾಶರಾಗಿದ್ದಾರೆ, ಪಕ್ಷದಲ್ಲಿ ಅವ್ರನ್ನ ಕ್ಯಾರೇ ಅಂತಿಲ್ಲ, ಅದ್ಕೆ ಹಿಂಗೆಲ್ಲ ಬಾಯಿಗೆ ಬಂದಂಗೆ ಮಾತಾಡ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಒನ್ ನೇಶನ್, ಒನ್ ಎಲೆಕ್ಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂಡಿಯಾ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಗಣತಂತ್ರ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ದೇಶ, ಒಂದು ರಾಜ್ಯದ ಅಧಿಕಾರ ಮತ್ತು ಸ್ವಾಯತ್ತತೆಗೆ ಕೇಂದ್ರ ಕೈ ಹಾಕೋಕೆ ಬರಲ್ಲ, ಒಂದು ರಾಷ್ಟ್ರ, ಒಂದು ಚುನಾವಣೆ ಅನ್ನೋದು ಸರ್ವಾಧಿಕಾರಿ ಧೋರಣೆಯ ಪ್ರವೃತ್ತಿ, ನಮ್ದು ಪ್ರಜಾಪ್ರಭುತ್ವ, ಮೊನ್ನೆ ತಾನೇ ನಮ್ಮ ರಾಜ್ಯದಲ್ಲಿ ಚುನಾವಣೆ ನಡೆದಿದೆ, ಈಗ ಮತ್ತೆ 2024ಕ್ಕೆ ನಮ್ಮ ಜೊತೆ ಚುನಾವಣೆಗೆ ಬನ್ನಿ ಅಂದ್ರೆ ಏನರ್ಥ ? ಇದು ಸರ್ವಾಧಿಕಾರಿ ಧೋರಣೆ, ಹಿಟ್ಲರ್ ಧೋರಣೆ ಅಲ್ವಾ? ಇದಕ್ಕೆ ಸಂವಿಧಾನದಲ್ಲಿ ಏನು ಸ್ಕೋಪ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.