ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಸುತ್ತಿನ ಸಂಪುಟ ರಚನೆ ಸರ್ಕಸ್ ಶುರುವಾಗಿದೆ ಈಗಾಗಲೇ 8 ಸಚಿವರು ಆಯ್ಕೆಯಾಗಿದ್ದು, ಉಳಿದ ಖಾತೆಗಳಿಗೆ ಸ್ಥಾನ ಭರ್ತಿ ಮಾಡಬೇಕಿದೆ.
ಇಂದು ಹೈಕಮಾಂಡ್ ಜೊತೆಗೆ ಡಿಕೆಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸಭೆ ಫಿಕ್ಸ್ ಆಗಿದೆ.ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಇಂದು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ.
ರಾತ್ರಿಯೇ ಹೈಕಮಾಂಡ್ ನಾಯಕರ ಜೊತೆ ಮೀಟಿಂಗ್ ನಡೆಯಲಿದೆ. ಎಂಟು ಮಂದಿ ಮಾತ್ರ ಸಂಪುಟ ಸೇರ್ಪಡೆಯಾಗಿರುವುದರಿಂದ ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಭೆ ನಡೆಯಲಿದೆ.ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು, ಸಂಪುಟಕ್ಕೆ ತಮ್ಮ ಆಪ್ತರನ್ನ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆಶಿ ಜಿದ್ದಿಗೆ ಬಿದ್ದಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ಯಾರಿಗೆಲ್ಲ ಮಂತ್ರಿಭಾಗ್ಯ ಸಿಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಅಂದಹಾಗೆ ಸಂಭವನೀಯ ಸಚಿವರ ಪಟ್ಟಿ ಇಲ್ಲಿದ್ದು,ಈ ಉಭಯ ನಾಯಕರು ತಮ್ಮದೇ ಆದ ಪಟ್ಟಿಯೊಂದಿಗೆ ಹೈಕಮಾಂಡ್ ಬಳಿ ತೆರಳುವುದು ಬಹುತೇಕ ಖಚಿತವಾಗಿದೆ. ಸಂಭವನೀಯ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಅನ್ನೋದು ನೋಡೋದಾದ್ರೆ …ಕೃಷ್ಣ ಬೈರೇಗೌಡ/ಎಂ.ಕೃಷ್ಣಪ್ಪ, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಮಧು ಬಂಗಾರಪ್ಪ, ಹಂಪನಗೌಡ ಬಾದರ್ಲಿ/ಬಸನಗೌಡ ತುರ್ವಿಹಾಳ್, ಶಿವಾನಂದ ಪಾಟೀಲ್, ಶಿವರಾಜ ತಂಗಡಗಿ, ಕೆ.ಎನ್.ರಾಜಣ್ಣ, ಬಸವರಾಜ ರಾಯರೆಡ್ಡಿ/ರಾಘವೇಂದ್ರ ಹಿಟ್ನಾಳ್ ಲಕ್ಷ್ಮೀ ಹೆಬ್ಬಾಳಕರ್,ಲಕ್ಷ್ಮಣ ಸವದಿ, ಎಚ್.ಕೆ.ಪಾಟೀಲ್/ ಜಿ.ಎಸ್.ಪಾಟೀಲ್, ಎಚ್.ಸಿ.ಮಹದೇವಪ್ಪ/ ನರೇಂದ್ರಸ್ವಾಮಿ, ಈಶ್ವರ್ ಖಂಡ್ರೆ, ಚೆಲುವರಾಯಸ್ವಾಮಿ, ಎಸ್.ಎಸ್.ಮಲ್ಲಿಕಾರ್ಜುನ್, ವಿನಯ್ ಕುಲಕರ್ಣಿ, ಸಂತೋಷ್ ಲಾಡ್ ವಿಧಾನಪರಿಷತ್‌ನಿಂದ ಸಲೀಂ ಅಹಮದ್ ಬಿ.ಕೆ.ಹರಿಪ್ರಸಾದ್ ಹೆಸರುಗಳು ಪಟ್ಟಿಯಲ್ಲಿವೆ.